ಕೆಂಭಾವಿ: ಸಮೀಪದ ಪತ್ತೇಪುರ ಗ್ರಾಮದಲ್ಲಿ ಭಾನುವಾರ ಸಂಜೆ ಬೀಸಿದ ಭಾರಿ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ರೈತ ಶಿವಪ್ಪ ಕಷ್ಟಪಟ್ಟು ಬೆಳೆದಿದ್ದ ನೂರಾರು ಬಾಳೆಗಿಡಗಳು ಸಂಪೂರ್ಣ ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಪಟ್ಟಣಕ್ಕೆ ಸೇರಿದ ವಾರ್ಡ್ ನಂಬರ್ 20ರ ಪತ್ತೇಪುರ ಗ್ರಾಮದ ಸರ್ವೆ ನಂಬರ್ 15 ರಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ರೈತ ಶಿವಪ್ಪ ತಂದೆ ಭೀಮರಾಯ ಕಾಡಮಗೇರಿ ಎಂಬುವವರು ತಮಗೆ ಸೇರಿದ ಜಮೀನಿನಲ್ಲಿ ಸಾಲ ಮಾಡಿ ಪರಿಶ್ರಮದಿಂದ ಬಾಳೆಗಿಡಗಳನ್ನು ಬೆಳೆಸಿದ್ದರು.

ಇನ್ನೆನು ಕೆಲವೇ ದಿನಗಳಲ್ಲಿ ಬಾಳೆ ಫಸಲು ಕೈಗೆ ಬಂದು ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ವಿಧಿಯ ಆಟ ಬೇರೆಯೇ ಆಗಿತ್ತು. ಭಾನುವಾರ ಸಂಜೆ ದಿಢೀರನೆ ಅಪ್ಪಳಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಸುಮಾರು 250 ರಿಂದ 300 ಬಾಳೆ ಗಿಡಗಳು ಬುಡಸಮೇತ ಮುರಿದು ಬಿದ್ದು ಸಂಪೂರ್ಣ ನಾಶವಾಗಿವೆ.

ಬಾಳೆ ತೋಟ ಸಂಪೂರ್ಣ ಹಾನಿಯಾಗಿರುವುದರಿಂದ ಸುಮಾರು ₹6 ರಿಂದ ₹7 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಸಾಲದ ಸುಳಿಗೆ ಸಿಲುಕಿ ತತ್ತರಿಸಿರುವ ರೈತ ಶಿವಪ್ಪ, ಕೈಗೆ ಬಂದ ಬೆಳೆ ಕಣ್ಣೆದುರೇ ಮಣ್ಣು ಪಾಲಾಗಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ.

‘ತಮಗೆ ಆಗಿರುವ ಭಾರಿ ನಷ್ಟಕ್ಕೆ ಸರ್ಕಾರವೇ ಸೂಕ್ತ ಪರಿಹಾರ ನೀಡಬೇಕು’ ಎಂದು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ಭೇಟಿ–ಪರಿಶೀಲನೆ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದಾರೆ.

ಬಿರುಗಾಳಿಯಿಂದ ಆದ ಹಾನಿಯ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಿ ಉನ್ನತ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-30-962091227

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.