ಕೆಂಭಾವಿ: ಸಿಲಿಂಡರ್ ಸಮಸ್ಯೆಯ ವದಂತಿಯಿಂದ ಪಟ್ಟಣದ ಗ್ಯಾಸ್ ಅಂಗಡಿಯ ಮುಂದೆ ಜನತೆ ಸಾಲುಗಟ್ಟಿ ನಿಲ್ಲುತ್ತಿದ್ದು, ಅಂಗಡಿಯ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.

ಕೇಂದ್ರ ಸರ್ಕಾರ ತೈಲ ಮತ್ತು ಸಿಲಿಂಡರ್ ಕೊರತೆ ಇಲ್ಲವೆಂದು ಜನತೆಗೆ ಮನವರಿಕೆ ಮಾಡುತ್ತ ಬಂದರೂ ಮುಂಬರುವ ದಿನಗಳಲ್ಲಿ ಅಡುಗೆ ಅನಿಲದ ಕೊರತೆ ಕಾಡಲಿದೆ ಎಂಬ ಭಯದಿಂದ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮದ ಗ್ರಾಹಕರು ಇಲ್ಲಿನ ಶ್ರೀನಿಧಿ ಇಂಡಿನ್ ಗ್ಯಾಸ್ ಕಂಪನಿಯ ಮುಂದೆ ನಿತ್ಯ ಜಮಾವಣೆಗೊಳ್ಳುತ್ತಿದ್ದಾರೆ.

ಕೆಲವರಿಗೆ ಸಿಲಿಂಡರ್ ಬುಕ್ ಮಾಡುವ ಮೊಬೈಲ್ ನಂಬರ್ ಸಮಸ್ಯೆ ಕಾಡುತ್ತಿದ್ದರೆ, ಇನ್ನೂ ಕೆಲವರಿಗೆ ಕೆವೈಸಿ ಮಾಡದಿರುವ ಸಮಸ್ಯೆಯಿಂದ ಸಿಲಿಂಡರ್ ಸಿಗದೆ ವಾಪಸ್ ಆಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕೆವೈಸಿ ಮಾಡುವಂತೆ ಶ್ರೀನಿಧಿ ಅಂಗಡಿಯ ಮಾಲೀಕರು ಮತ್ತು ವ್ಯವಸ್ಥಾಪಕರು ಅನೇಕ ದಿನಗಳಿಂದ ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸುತ್ತಾ ಬಂದಿದ್ದರೂ ಈ ಬಗ್ಗೆ ಅಸಡ್ಯೆ ತೋರಿದ ಜನತೆ ಈಗ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಗ್ರಾಹಕರ ಮನೆಬಾಗಿಲಿಗೆ ಸಿಲಿಂಡರ್ ತಲುಪಿಸುವ ವ್ಯವಸ್ಥೆಯನ್ನು ಸ್ಥಳೀಯ ಗ್ಯಾಸ್ ಅಂಗಡಿ ಮಾಲೀಕರು ಮಾಡಿದ್ದರೂ ನಿತ್ಯ ಆಟೊ, ದ್ವಿಚಕ್ರ ವಾಹನ ಸೇರಿ ಹಲವು ವಾಹನಗಳಲ್ಲಿ ಜನತೆ ತಮ್ಮ ಗ್ಯಾಸ್ ಪಡೆಯಲು ಬರುತ್ತಿದ್ದಾರೆ. ಒಟ್ಟು 26000 ಗ್ರಾಹಕರು ಈ ಅಂಗಡಿ ವ್ಯಾಪ್ತಿಗೆ ಒಳಪಡುತ್ತಿದ್ದು, ದಿನನಿತ್ಯ 400ಕ್ಕೂ ಅಧಿಕ ಅಡುಗೆ ಅನಿಲದ ಬೇಡಿಕೆ ಪಟ್ಟಣಕ್ಕೆ ಇದೆ ಎನ್ನಲಾಗುತ್ತಿದೆ.

ಸಿಲಿಂಡರ್ ಕೊರತೆ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ಗೂ ತಟ್ಟಿದ್ದು, ಕಳೆದ ಹದಿನೈದು ದಿನಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆಯಿಂದ ಸೀಮಿತ ಅವಧಿಗೆ ಮಾತ್ರ ಇಂದಿರಾ ಕ್ಯಾಂಟೀನ್ ಕೆಲಸ ಮಾಡುತ್ತಿದ್ದು ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-30-1730403596

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.