ಬಂದ ಭಕ್ತರಿಗೆ ಎಲ್ಲ ವ್ಯವಸ್ಥೆ: ಶರಣಪ್ಪ ಶರಣರು
ನಗನೂರ ಶರಣಬಸವೇಶ್ವರ ಜಾತ್ರೆಗೆ ಹಲವಾರು ವರ್ಷಗಳ ಇತಿಹಾಸವಿದ್ದು, ಇಲ್ಲಿ ನಡೆಯುವ ದನಗಳ ಜಾತ್ರೆ ಈ ಭಾಗದಲ್ಲಿಯೇ ಅತ್ಯಂತ ದೊಡ್ಡ ರಾಸುಗಳ ಜಾತ್ರೆ ಎನಿಸಿದೆ. ಭಕ್ತರ ಸಹಕಾರದಿಂದ ಜಾತ್ರೆಗೆ ತೊಂದರೆಯಾಗದಂತೆ ನೀರು, ಮೇವಿನ ಸೌಲಭ್ಯ ಕಲ್ಪಿಸಿದ್ದು ಬಂದ ಎಲ್ಲ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೀಠಾಧಿಪತಿ ಶರಣಪ್ಪ ಶರಣರು ತಿಳಿಸಿದರು.