ಸೇಡಂ: ‘ತಾಲ್ಲೂಕಿನ ಕೋಡ್ಲಾದಿಂದ ಸೇಡಂ ವರೆಗಿನ 10 ಕಿಮೀ ರಸ್ತೆ ಸುಧಾರಣೆಗೆ ₹6 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತರಲಾಗುವುದು’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ಕೋಡ್ಲಾ ಗ್ರಾಮದಿಂದ ಸೇಡಂನ ಕೋಡ್ಲಾ ಕ್ರಾಸ್ವರೆಗೆ ಮುಖ್ಯಮಂತ್ರಿ ಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ರಸ್ತೆ ಸುಧಾರಣೆ ಕಾಮಗಾರಿಗೆ ಭಾನುವಾರ ರಸ್ತೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

‘ಕೋಡ್ಲಾ ಗ್ರಾಮದಲ್ಲಿ ₹2 ಕೋಟಿ ವೆಚ್ಚದ ರೈತ ಸಂಪರ್ಕ ಕೇಂದ್ರ, ಅಲ್ಪಸಂಖ್ಯಾತರ ವಸತಿ ಶಾಲೆ ಜೀರ್ಣೋದ್ಧಾರ, ಮೊರಾರ್ಜಿ ವಸತಿ ಶಾಲೆ ಜೀರ್ಣೋದ್ಧಾರಕ್ಕೆ ಕೋಟ್ಯಾಂತರ ಅನುದಾನ ಮಂಜೂರಾಗಿದೆ’ ಎಂದರು.

ಕೋಡ್ಲಾ ಗ್ರಾಮದ ಮುಖ್ಯರಸ್ತೆ ವಿಸ್ತೀರ್ಣದ ಬೇಡಿಕೆ ಇದ್ದು ಅಂದಾಜು ಯೋಜನೆ ಸಿದ್ದಪಡಿಸುವಂತೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಅನುದಾನ ತಂದು ಕೆಲಸ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ರವಿ ಸಾಹು ತಂಬಾಕೆ, ಮುಖಂಡ ಶಂಭುರೆಡ್ಡಿ ಮದ್ನಿ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ರಾಜುಗೌಡ ಪಾಟೀಲ ಬೆನಕನಹಳ್ಳಿ, ಸತೀಶರೆಡ್ಡಿ ಪಾಟೀಲ ಮಾತನಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ರವಿ ನಂದಿಗಾಮ, ವಿಶ್ವನಾಥ ಪಾಟೀಲ, ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜಪಾಟೀಲ ಊಡಗಿ, ಸತೀಶರೆಡ್ಡಿ ಪಾಟೀಲ, ಶಂಭುರೆಡ್ಡಿ ಮದ್ನಿ, ಹೇಮಾರೆಡ್ಡಿ ಪಾಟೀಲ, ಸತೀಶ ಪೂಜಾರಿ, ಶಿವಲಿಂಗಯ್ಯ ಗಚ್ಚಿನಮಠ, ಜೈಭೀಮ ಊಡಗಿ, ದೇವಿಂದ್ರಪ್ಪ ಸಣ್ಣಿಂಗಿ, ರಾಜಶೇಖರೆಡ್ಡಿ ಪಾಟೀಲ, ನಾರಾಯಣರೆಡ್ಡಿ ಜಾಕನಪಲ್ಲಿ, ಆಯಿಲರೆಡ್ಡಿ ಪಾಟೀಲ, ಅನಂತಯ್ಯ ಗುತ್ತೆದಾರ, ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಪ್ರಭಯ್ಯ ಮಠಪತಿ, ಚನ್ನಪ್ಪ ರಾಯಣ್ಣನವರ್, ಶಿವಶರಣಪ್ಪ ಜೇವರ್ಗಿ, ವಿಶ್ವನಾಥ ಮಾವಿನಗಿಡ ಇದ್ದರು.

ಭೀಮರಾಯ ಹಣಮನಳ್ಳಿ ಸ್ವಾಗತಿಸಿದರು. ಅರವಿಂದ ಸಣ್ಣಿಂಗಿ ನಿರೂಪಿಸಿದರು.

20 ವರ್ಷದ ಅಭಿವೃದ್ಧಿ ಕಾರ್ಯಗಳ ಲೆಕ್ಕ ಕೊಡೋಕೆ ನಾನು ಸಿದ್ದ. ಕಳೆದ 5 ವರ್ಷ ಆಡಳಿತ ನಡೆಸಿದವರೂ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುವುದರ ಕುರಿತು ಲೆಕ್ಕ ಕೊಡಲಿ
ಶರಣಪ್ರಕಾಶ ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.