ಆಲಮೇಲ: ತಾಲ್ಲೂಕಿನ ಸುಕ್ಷೇತ್ರ ಕುಮಸಿ ಗ್ರಾಮದ ವಿಶ್ವರೂಪದ ದರ್ಶನ ದತ್ತ ಪಾದುಕಾ ಕ್ಷೇತ್ರಕ್ಕೆ ಇದೇ 26ರಂದು ಗಾಣಗಾಪುರದಿಂದ ದತ್ತಾತ್ರೇಯ ಮಹಾರಾಜರ ಪಲ್ಲಕ್ಕಿ ಆಗಮಿಸಲಿದೆ.

ವೈಶಾಖ ಶುದ್ಧ ದಶಮಿಯ ದಿನದಂದು ನರಸಿಂಹ ಸರಸ್ವತಿ ಮಹಾರಾಜರು ತ್ರಿವಿಕ್ರಮ ಭಾರತೀಯತಿಗಳಿಗೆ ವಿಶ್ವರೂಪ ದರ್ಶನ ಕೊಟ್ಟು ಕ್ಷೇತ್ರವನ್ನು ಪಾವನಗೊಳಿಸಿದರು. ಇತಿಹಾಸದಲ್ಲಿ ವಿಶ್ವರೂಪ ದರ್ಶನ ಕೊಟ್ಟಿದ್ದು ಎರಡು ಸಂದರ್ಭದಲ್ಲಿ ಮೊದಲನೇಯದು ಶ್ರೀ ಕೃಷ್ಣ ಪರಮಾತ್ಮರು ಮಹಾಭಾರತದಲ್ಲಿ ಅರ್ಜುನನಿಗೆ ವಿಶ್ವರೂಪ ದರ್ಶನ ನೀಡಿ ಭಗವದ್ಗೀತೆಯನ್ನು ಬೋಧಿಸಿದ್ದು ಎರಡನೆಯದು ಗುರು ಚರಿತ್ರೆಯಲ್ಲಿ ಲಿಖಿತ ರೂಪದಲ್ಲಿರುವಂತೆ ನರಸಿಂಹ ಸರಸ್ವತಿ ಮಹಾರಾಜರು ಶ್ರೀ ಕ್ರಮ ಭಾರತೀಯತೆಗಳಿಗೆ ವಿಶ್ವರೂಪ ದರ್ಶನ ನೀಡಿ ಕೃತಾರ್ಥ ರನ್ನಾಗಿ ಮಾಡಿದ್ದು.

ಅದೇ ದಿನದ ಸವಿನೆನಪಿಗಾಗಿ ಪ್ರತಿ ವರ್ಷವೂ ಕೂಡ ಸುಕ್ಷೇತ್ರ ಗಾಣಗಾಪುರದಿಂದ ಕುಂಶಿ ಕ್ಷೇತ್ರಕ್ಕೆ ಪಲ್ಲಕ್ಕಿ ಆಗಮಿಸುತ್ತದೆ, ಪೂಜೆ, ಹೋಮ, ಹವನ, ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ಧರ್ಮದರ್ಶಿ ರಘುನಾಥ್ ಭಟ್ ಜೋಶಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-26-1903022818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.