ಚಿಂಚೋಳಿ: ತಾಲ್ಲೂಕಿನ ಕುಪನೂರ ಗ್ರಾಮದಲ್ಲಿ ಪುರಾತನ ಶಾಸನಗಳು ಪಾಳು ಕೊಂಪೆಯಲ್ಲಿ ಬಿದ್ದಿದ್ದು ರಕ್ಷಣೆಯಿಲ್ಲದೇ ಹಾಳಾಗುತ್ತಿವೆ.

ಗ್ರಾಮದ ಹನುಮಾನ ಮಂದಿರದ ಎದುರು ಚರಂಡಿ ಪಕ್ಕದಲ್ಲಿ ಚೌಕಾಕಾರದ ಕಲ್ಲು ಬಿದ್ದರೆ, ಅಷ್ಟಪೈಲಿ(ಎಂಟು ಮೂಲೆಯ) ಕಲ್ಲು ಹೊಲದ ಬೇಲಿಯ ಕೊಂಪೆಯಲ್ಲಿ ಅನಾಥವಾಗಿ ಬಿದ್ದಿದ್ದು ರಕ್ಷಣೆಗಾಗಿ ಗೋಗರೆಯುತ್ತಿವೆ.

ಗ್ರಾಮದ ಹನುಮಾನ ಮಂದಿರ ಜೀರ್ಣೋದ್ಧಾರ ಮತ್ತು ಹತ್ತಿರದ ಪುಷ್ಕರಣಿಯ ಹೂಳು ತೆರವು ಸಂದರ್ಭದಲ್ಲಿ ಗೋಡೆಯಲ್ಲಿ ಶಾಸನಗಳು ಲಭಿಸಿದ್ದವು.

ರಾಜ್ಯ ಪುರಾತತ್ವ ಇಲಾಖೆಯಿಂದ ಚಿಂಚೋಳಿ ತಾಲ್ಲೂಕಿನ ಶಾಸನಗಳು, ಐತಿಹಾಸಿಕ ಸ್ಮಾರಕಗಳ ಅಧ್ಯಯನ ಸಮೀಕ್ಷೆ ನಡೆಸಲಾಗಿದೆ. ಇನ್ನೂ ವರದಿ ಬರಬೇಕು ಎಂದು ಪುರಾತತ್ವ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಠಿಣವಾದ ಚೌಕಾಕಾರದ ಶಿಲೆಯಲ್ಲಿ ನಾಲ್ಕು ಮೂಲೆಯ ಕಲ್ಲಿನ ಮೇಲೆ ಹಿಂದೆ, ಮುಂದೆ ಹಾಗೂ ಮೇಲೆ ಹೀಗೆ ಮೂರು ಕಡೆ ಅಕ್ಷರದಲ್ಲಿ ಕೆತ್ತಿದ ಶಾಸನವಿದ್ದು ಬಿಸಿಲು, ಮಳೆ ಹಾಗೂ ಗಾಳಿಯಿಂದ ರಕ್ಷಣೆಯಿಲ್ಲದೇ ಹಾಳಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಇಲಾಖೆಯವರು ಶಾಸನದ ವಿಷಯ ಜನರಿಗೆ ತಿಳಿಸಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರಾದ ಜಗದೇವಯ್ಯ ಸ್ವಾಮಿ ಹಾಗೂ ಅಹೆಮದ್ ಪಟೇಲ್ ಒತ್ತಾಯಿಸಿದ್ದಾರೆ.

ಇದರ ಪಕ್ಕದಲ್ಲಿ ಹೊಲದ ಮೂಲೆಯಲ್ಲಿ ಕಪ್ಪು ಶಿಲೆಯ ಕಲ್ಲಿನ ಮೇಲೆ ಅಕ್ಷರ ಬರವಣಿಗೆಯಿದ್ದು ಇದು ಮುಳ್ಳು ಬೇಲಿಯ ಗಿಡಗಂಟೆಗಳ ಕಲ್ಲುಗಳಲ್ಲಿ ಬಿದ್ದು ಹಾಳಾಗುತ್ತಿದೆ.

ಸುಮಾರು 8-10 ವರ್ಷಗಳಿಂದ ಈ ಶಾಸನಗಳು ಅನಾಥವಾಗಿವೆ. ಈ ಶಾಸನ ಓದಲು ಕೆಲವರು ಬಂದು ಪರಿಶೀಲಿಸಿ ಹೋಗಿದ್ದಾರೆ. ಆದರೆ, ಶಾಸನದ ಬರಹದಲ್ಲಿ ಯಾವ ವಿಷಯ ಒಳಗೊಂಡಿದೆ ಎಂಬುದು ಬಹಿರಂಗವಾಗಿಲ್ಲ.

ಕುಪನೂರ ಧಾರ್ಮಿಕವಾಗಿ ಅತ್ಯಂತ ಮಹತ್ವದ ತಾಣ. ಇಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ, ಅಕ್ಕಮಹಾದೇವಿ ಗದ್ದುಗೆ, ಮಲ್ಲಿಕಾರ್ಜುನ ಗದ್ದುಗೆ ಹಾಗೂ ಹನುಮಾನಮಂದಿರ ಪಕ್ಕದಲ್ಲಿ ಪುಷ್ಕರಣಿ ಹಾಗೂ ಪುರಾತನ ರಾಮಲಿಂಗೇಶ್ವರ ದೇವಾಲಯಗಳಿವೆ. ಹನುಮಾನ ದೇವಾಲಯ ಜೀರ್ಣೋದ್ಧಾರಗೊಳಿಸಲಾಗಿದೆ. ರಾಮಲಿಂಗೇಶ್ವರ ದೇವಾಲಯ ಸಂಪೂರ್ಣ ಅವಸಾನ ಹೊಂದಿದ್ದು, ಅದೇ ಸ್ಥಳದಲ್ಲಿ ದೇವಾಲಯ ಮರು ನಿರ್ಮಾಣ ನಡೆಯುತ್ತಿದೆ. ಹನುಮಾನ ಮಂದಿರದ ಹಿಂದಿರುವ ಪುಷ್ಕರಣಿ ವಾಸ್ತವವಾಗಿ ರಾಮಲಿಂಗೇಶ್ವರ ಗುಂಡ ಇರುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂಗಯ್ಯ ಸ್ವಾಮಿ ಅಣವಾರ.

ಮಲ್ಲಿಕಾರ್ಜುನ ದೇವಾಲಯದ ಜಾತ್ರೆ ಭಾವೈಕ್ಯಕ್ಕೆ ಹೆಸರಾಗಿದ್ದು ಹಿಂದೂ ಮುಸಲ್ಮಾನರು ಭಕ್ತಿ, ಶ್ರದ್ಧೆಯಿಂದ ಮಲ್ಲಿಕಾರ್ಜುನನಿಗೆ ಆರಾಧಿಸುವುದರ ಜತೆಗೆ ಜಾತ್ರೆ ಮುಗಿಯುವವರೆಗೆ ಜೋಳದ ಸೀತನಿ ಸುಡುವುದಿಲ್ಲ. ಜೋಳದ ಸೀತನಿಯನ್ನು ಮಲ್ಲಿಕಾರ್ಜುನ ಪಲ್ಲಕ್ಕಿ ಮೇಲೆ ಅಕ್ಷತೆಯಾಗಿ ಹಾಕುವ ಪರಿಪಾಠ ಹಿಂದೂ ಮುಸಲ್ಮಾನರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-649899645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.