ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ | ‘ಐಎಎಸ್‌ ಅಧಿಕಾರಿಯಾಗುವಾಸೆ’

Last Updated 15 ಜುಲೈ 2020, 17:37 IST
ಅಕ್ಷರ ಗಾತ್ರ

ಅಫಜಲಪುರ: ‘ಉಪನ್ಯಾಸಕರ ಮಾರ್ಗದರ್ಶನ, ಪಾಲಕರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ನಮ್ಮ ತಂದೆ ತಾಯಿ ದಿನಾಲೂ ಕೂಲಿ ಕೆಲಸ ಮಾಡುತ್ತಿದ್ದರು. ನನಗೆ ಸ್ವಗ್ರಾಮ ಕೆರಕನ ಹಳ್ಳಿಯಿಂದ ಊಟ ಕಳುಹಿಸುತ್ತಿದ್ದರು. ನಾನು ಮುಂದೆ ಐಎಎಸ್‌ ಅಧಿಕಾರಿ ಆಗಬೇಕು ಎಂದು ಕೊಂಡಿದ್ದೇನೆ’

– ಇದು ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಒಟ್ಟು 600 ಅಂಕಗಳಿಗೆ 584 (ಶೇ 97.33) ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪಟ್ಟಣದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಬಸವರಾಜ ಪಾಟೀಲ ಸೇಡಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ಕೃಷಿ ಕೂಲಿಕಾರರ ಪುತ್ರ ಅಂಬರೀಷ್ ರೇವಣಸಿದ್ಧ ಕುಂಬಾರ ಅವರ ಮಾತು.

ವಿದ್ಯಾರ್ಥಿಯ ತಂದೆ ರೇವಣಸಿದ್ಧ ಹಾಗೂ ತಾಯಿ ಜಗದೇವಿ ಪ್ರತಿಕ್ರಿಯಿಸಿ, ‘ನಮ್ಮ ಮಗ ಊರಿಗೆ ಬರುತ್ತಿರಲಿಲ್ಲ, ಅಫಜಲಪುರ ಪಟ್ಟಣದಲ್ಲಿ ಕೋಣೆ ಬಾಡಿಗೆ ಹಿಡಿದು ಅಭ್ಯಾಸ ಮಾಡುತ್ತಿದ್ದ, ನಮ್ಮ ಪರಿಶ್ರಮ ಸಾರ್ಥಕವಾಗಿದೆ. ನಮಗೆ ತುಂಬಾ ಸಂತೋಷವಾಗಿದೆ’ ಎಂದರು.

‘ವಿದ್ಯಾರ್ಥಿ ದಿನಾಲೂ ತಪ್ಪದೆ ಶಾಲೆಗೆ ಬರುತ್ತಿದ್ದ, ಪ್ರತಿಯೊಂದು ವಿಷಯದ ಉಪನ್ಯಾಸಕರು ಹೇಳಿಕೊಡುತ್ತಿದ್ದ ಮನೆಯ ಪಾಠವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ’ ಎಂದು ಕಾಲೇಜಿನ ಪ್ರಾಚಾರ್ಯ ಜಾಫರ್‌ಸಾಬ್‌ ದೇವರಮನಿ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಚೆನ್ನಬಸಯ್ಯ ಹಿರೇಮಠ, ಕಾರ್ಯದರ್ಶಿ ಮಳೇಪ್ಪ ಡಾಂಗೆ ಪ್ರತಿಕ್ರಿಯಿಸಿ,‘ನಮ್ಮ ಕಾಲೇಜಿನ ಫಲಿತಾಂಶವು ಪ್ರತಿವರ್ಷ ಹೆಚ್ಚುತ್ತಿರುವುದಕ್ಕೆ ಉಪನ್ಯಾಸಕರ ಪರಿಶ್ರಮ, ಪಾಲಕರ ಸಹಕಾರ ಕಾರಣವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT