ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದ ಹಾಜಿಸರ್ವರ್ (ಆದಿ ಶರಣ) ಜಾತ್ರೆ ಅಂಗವಾಗಿ ಗುರುವಾರ ರಾತ್ರಿಯಿಡೀ ಜರುಗಿದ ಗಂಧದ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಭಕ್ತರು ‘ಹಾಜಿಸರ್ವರ್ ಕೀ ದೋಸ್ತಾರ ಹೋದ್ದಿನ್’ ಎಂದು ಜಯಘೋಷ ಮೊಳಗಿಸಿದರು.

ಗಂಧದ ಮೆರವಣಿಗೆ ಗುರುವಾರ ರಾತ್ರಿ 11ಕ್ಕೆ ಆರಂಭಗೊಂಡು ಶುಕ್ರವಾರ ಬೆಳಗಿನ ಜಾವ 5 ಗಂಟೆಯವರೆಗೆ ಜರುಗಿತು.

ಪೂಜಾರಿಗಳ ಮನೆಯಿಂದ ಗಂಧ ಲೇಪಿತ ಕಳಸಗಳನ್ನು ತಂದು ಗ್ರಾಮದ ನಡುಗಡ್ಡೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ, ಹಿಂದೂ ಪೂಜಾರಿಗಳು ಹಾಗೂ ಮುಸ್ಲಿಂ ಮೌಲ್ವಿಗಳು ತಮ್ಮ ಧರ್ಮನುಸಾರ ಪೂಜೆ ಸಲ್ಲಿಸಿದರು.

ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಪುಷ್ಪ, ಛತ್ರಿ–ಚಾಮರ ಹಾಗೂ ಬೆಳ್ಳಿ ಕುದುರೆಗಳನ್ನು ತಂದು ಲೋಹದ ಪಂಚ ಕಳಸಗಳಿಗೆ ಅರ್ಪಿಸಿದರು. ಹೂಗಾರರು ಹಾಗೂ ಮುಸ್ಲಿಮರು ಒಟ್ಟಾಗಿ ಭಕ್ತರು ನೀಡಿದ ಹರಕೆಯ ವಸ್ತುಗಳನ್ನು ಸ್ವೀಕರಿಸಿದರು. ಗಂಧದ ಮೆರವಣಿಗೆಗೆ ಬೆಳಕಿನ ಸ್ಪರ್ಶ ನೀಡಲು ಭಕ್ತರು ದೀಪದ ಎಣ್ಣೆ ಸುರಿದರು.

ಮುಸ್ಲಿಮರು ಧರ್ಮ ಪಠಣ ಮಾಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಂಧದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಗುಡ್ಡದ ಮೇಲಿರುವ ದರ್ಗಾ ತಲುಪಿತು.

ಹರಿದುಬಂದ ಭಕ್ತರ ದಂಡು: ಶುಕ್ರವಾರ ಬೆಳಿಗ್ಗೆಯಿಂದ ಭಕ್ತರ ದಂಡೇ ಗುಡ್ಡದತ್ತ ಹರಿದುಬಂತು. ಹಿಂದೂಗಳು ತಮ್ಮ ಮನೆಗಳಿಂದ ದರ್ಗಾದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.

ಹಿಂದೂಗಳು ಮುಸ್ಲಿಂ ಫಕೀರ ರನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆದುಕೊಂಡು ಹೋಗಿ ಭಕ್ತಿಯ ಕಾಣಿಕೆ ಸಲ್ಲಿಸಿದರು. ಮಾಂಸದ ನೈವೇದ್ಯ, ಹೋಳಿಗೆ, ಮಾದಲಿ ಹಾಗೂ ಇತರ ಸಿಹಿ ಪದಾರ್ಥದ ನೈವೇದ್ಯವನ್ನು ದೇವರಿಗೆ ಅರ್ಪಿಸಿದರು. ಟ್ರ್ಯಾಕ್ಟರ್ ಹಾಗೂ ಬೈಕ್ಗಳಲ್ಲಿ ಆಗಮಿಸಿದ್ದ ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೇ ಬರಿಗಾಲಲ್ಲಿ ಬೆಟ್ಟವೇರಿ ನೈವೇದ್ಯೆ ಸಮರ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-31-722150031

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.