ಭಾನುವಾರ, ಏಪ್ರಿಲ್ 18, 2021
24 °C

ಏಮ್ಸ್‌ಗೆ 125 ಎಕರೆ ಜಾಗ ಮಂಜೂರು; ಇಎಸ್‌ಐಗೆ ರಾಜ್ಯ ಸರ್ಕಾರದಿಂದ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ 125 ಎಕರೆ ಜಮೀನನ್ನು ‘ಏಮ್ಸ್‌’ ಸ್ಥಾಪನೆಗಾಗಿ ಮಂಜೂರು ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಇಎಸ್‌ಐಸಿ ನಿರ್ದೇಶಕರಿಗೆ ಪತ್ರ ರವಾನಿಸಲಾಗಿದೆ. ಇದರಿಂದ ಕಲಬುರ್ಗಿಯ ಕೈ ತಪ್ಪಿಹೋದ ಏಮ್ಸ್‌ ಅನ್ನು ಇಲ್ಲೇ ಉಳಿಸಿಕೊಳ್ಳುವ ಆಶಾಭಾವ ಮೂಡಿವೆ.

ಮಾರ್ಚ್‌ 24ರಂದು ಈ ಪತ್ರ ಬರೆದಿರುವ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ, ‘ಇಎಸ್‌ಐ ಆಸ್ಪತ್ರೆಯನ್ನು ಏಮ್ಸ್‌ ಮಾದರಿಯಲ್ಲಿ ಸ್ಥಾಪಿಸಲು ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಈಗಾಗಲೇ ನೀಡಿದ 75 ಎಕರೆ ಜಮೀನಿನ ಜತೆಗೆ, ಇನ್ನೂ 125 ಎಕರೆಯನ್ನು ನೀಡಲಾಗುವುದು. ಇದಕ್ಕೆ ನವದೆಹಲಿಯ ಏಮ್ಸ್‌ನಿಂದ ಅನುಮತಿ ಸಿಕ್ಕ ನಂತರ ಜಾಗ ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಾ.ಉಮೇಶ ಜಾಧವ ಅವರು, ‘ಸೂಕ್ತ ಜಾಗ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಏಮ್ಸ್‌ ಅನ್ನು ಧಾರವಾಡಕ್ಕೆ ಸ್ಥಳಾಂತರಿಸಿದೆ. ಹೀಗಾಗಿ, ಈಗಾಗಲೇ ನೀಡಲಾದ 75 ಎಕರೆ ಹಾಗೂ ಅಗತ್ಯವಿರುವ ಹಚ್ಚುವರಿ 125 ಎಕರೆ ಜಾಗ ನಮಗೆ ಲಭ್ಯವಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಬೇಕಿದೆ. ಈ ಕಾರಣಕ್ಕಾಗಿಯೇ ರಾಜ್ಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಚರ್ಚಿಸಿ, ಜಾಗ ಮಂಜೂರಾತಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಮ್ಸ್‌ ಅನ್ನು ಕಲಬುರ್ಗಿಯಲ್ಲೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.