ಅಟಲ್‌ಜಿಗೆ ಭಾವಪೂರ್ಣ ಶ್ರದ್ಧಾಂಜಲಿ

7

ಅಟಲ್‌ಜಿಗೆ ಭಾವಪೂರ್ಣ ಶ್ರದ್ಧಾಂಜಲಿ

Published:
Updated:
Deccan Herald

ಕಲಬುರ್ಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಿಜೆಪಿ ಮುಖಂಡರು ಹಾಗೂ ವಿವಿಧ ಸಂಘಟನೆಗಳು ಸದಸ್ಯರು ಶುಕ್ರವಾರ ನಗರದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ಮಹಿಳಾ ಘಟಕದಿಂದ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಹೇಶ್ವರಿ ವಾಲಿ, ರೇಣುಕಾ ಬಿರಾದಾರ, ನಂದಕುಮಾರ ನಾಗಭುಜಂಗೆ, ಪ್ರವೀಣಕುಮಾರ ಕೋಣೆ, ವಿಜಯಲಕ್ಷ್ಮಿ ಸಾಹು, ಸಂಗೀತಾ, ಮಹಾಂತೇಶ, ಸತೀಶ ರಾಠೋಡ, ಚಂದ್ರಕಲಾ ಇದ್ದರು.

ಹೈದರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂದ ಸದಸ್ಯರು ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಚಿನ್ ಫರಹತಾಬಾದ್, ಮಂಜುನಾಥ ನಾಲವಾರಕರ್, ದತ್ತು ಭಾಸಗೆ, ನಾಗರಾಜ, ಕಾಶಿನಾಥ ಮಾಳಗೆ ಇದ್ದರು.

ಕರ್ನಾಟಕ ಸಂಘಟನೆ ವೇದಿಕೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು. ದತ್ತು ಹಯ್ಯಾಳಕರ್, ಸಚಿನ್ ಕಟ್ಟಿಮನಿ, ಸಂತೋಷ ರಾಠೋಡ, ಶಿವಾಜಿ ಚವಾಣ್, ಮಾರುತಿ ಹಾದಿಮನಿ ಇದ್ದರು.

ಕನ್ನಡ ರಣಧೀರ ಪಡೆ ಸದಸ್ಯರು ಅಟಲ್‌ಜಿ ಭಾವಚಿತ್ರಕ್ಕೆ ಪುಷ್ಪಾರಚಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪದಾಧಿಕಾರಿಗಳಾದ ನಾಗರಾಜ ಪಿ.ಬಾಣೆಕಾರ, ರೇಣುಕಾ ಗಾಯಕವಾಡ, ರವಿ ಬೆಲ್ಲದ, ರಾಹುಲ ಸಾಳೆ, ಶಿವಪುತ್ರ ಬೆಲ್ಲದ, ಚಿರಂಜೀವಿ ಪಾಟೀಲ, ಅಂಬಿಕಾ ಕಾಂಬಳೆ, ಲೀಲಾವತಿ ಗಾಯಕವಾಡ, ಆನಂದ ಕಪನೂರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !