ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕೂಟರ ಉತ್ಸವ ಆಚರಿಸಲಿ- ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ

Last Updated 29 ಡಿಸೆಂಬರ್ 2021, 6:00 IST
ಅಕ್ಷರ ಗಾತ್ರ

ಕೋಡ್ಲಾ(ಸೇಡಂ): ‘ರಾಜ್ಯ ಸರ್ಕಾರ ಹಂಪಿ ಉತ್ಸವದ ಮಾದರಿಯಂತೆ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಥಮ ಕೃತಿ ನೀಡಿದ ಕನ್ನಡದ ನಾಡು ರಾಷ್ಟ್ರಕೂಟರ ಉತ್ಸವ ಆಚರಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಶರಣು ಬಿ.ಗದ್ದುಗೆ ಒತ್ತಾಯಿಸಿದರು.

ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಆಯೋಜಿಸಿದ್ಧ ರಾಷ್ಟ್ರಕೂಟರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಆಡಳಿತದ ಅವಧಿಯಲ್ಲಿ ಒಂದು ವರ್ಷ ರಾಷ್ಟ್ರಕೂಟರ ಉತ್ಸವವನ್ನು ಸರ್ಕಾರದಿಂದ ಆಚರಿಸಲಾಗಿತ್ತು. ಆದರೆ ನಾನು ಶಾಸಕನಾದ ಮೇಲೆ ಸರ್ಕಾರದಿಂದಲೇ ರಾಷ್ಟ್ರಕೂಟರ ಉತ್ಸವ ಆಚರಿಸುವುದಾಗಿ ಭರವಸೆ ನೀಡಿದ್ದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮೂರು ವರ್ಷ ಕಳೆದರೂ ಸಹ ಉತ್ಸವದತ್ತ ಆಸಕ್ತಿ ತೋರಿಸಿಲ್ಲ. ತಮ್ಮದೆ ಸರ್ಕಾರ ಇರುವುದರಿಂದ ಮುಂದಿನ ದಿನಗಳಲ್ಲಿ ರಾಷ್ಟ್ರಕೂಟರ ಉತ್ಸವ ಈ ಭಾಗದ ವೈಭವವಾಗಬೇಕು’ ಎಂದರು.

ತೋಟಗಾರಿಕೆ ಮಹಾಮಂಡಳಿ ರಾಜ್ಯ ಘಟಕದ ಮಾಜಿ ಅದ್ಯಕ್ಷ ಬಸವರಾಜ ಪಾಟೀಲ ಊಡಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶೇಖರ ನಾಟೀಕಾರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಬೊಂಬೆ ನೃತ್ಯ ಪ್ರದರ್ಶಿಸಿದರು.

ನಟಿ ಸಂಯುಕ್ತ ಹೊರನಾಡು, ನಟ ಸಂತೋಷ ಉಪ್ಪಿನ್ ಕಾರ್ಯಕ್ರಮಕ್ಕೆ ಆಗಮಿಸಿ, ಗಮನ ಸೆಳೆದರು.

ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಕೋಡ್ಲಾ ಡಾ.ನಂಜುಂಡಯ್ಯಸ್ವಾಮಿ, ಜಾಕನಪಲ್ಲಿ ಅಭಿನವ ಗವಿಸಿದ್ದಲಿಂಗ ಶಿವಾಚಾರ್ಯ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ, ಪರ್ವತರೆಡ್ಡಿ ಪಾಟೀಲ, ಶಿವಲಿಂಗರೆಡ್ಡಿ ಬೆನಕನಳ್ಳಿ, ಶಂಭುರೆಡ್ಡಿ ಮದ್ನಿ, ಶಿವಶರಣರೆಡ್ಡಿ ಪಾಟೀಲ, ಜೈಭೀಮ ಊಡಗಿ, ಡಾ.ಶ್ರೀನಿವಾಸ ಮೊಕದಂ, ಭೀಮರಾಯ ಹಣಮನಳ್ಳಿ, ಅಬ್ದುಲ್ ರಶೀದ್, ಶಿವಲಿಂಗಯ್ಯ ಗಚ್ಛಿನಮಠ, ಸಂತೋಷ ಚೌದ್ರಿ, ಮುಡಬಿ ಗುಂಡೇರಾವ, ಹೇಮರೆಡ್ಡಿ ಪಾಟೀಲ, ರವಿ ಸಾಹು, ಶಂಭುರೆಡ್ಡಿ ನರಸಗೋಳ, ಜಗದೀಶ, ರುದ್ರಮನಿ, ಹಣಮಂತ, ಪ್ರವೀಣ ಕೋಡ್ಲಾ, ಸುರೇಶರೆಡ್ಡಿ ಮದ್ನಿ, ಸಿದ್ದಣ್ಣ ಹೊಸ್ಮನಿ, ಭೀಮಣ್ಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮಂತ ಅರಳಿ ನಿರೂಪಿಸಿದರು. ಅರವಿಂದ ಸಣ್ಣಿಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT