ಗುರುವಾರ , ಜುಲೈ 29, 2021
25 °C

ಅರ್ಜುಣಗಿ ತಾಂಡಾದಲ್ಲಿ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಅರ್ಜುಣಗಿ ತಾಂಡಾದಲ್ಲಿ ಬುಧವಾರ ಲಂಬಾಣಿ ಭೋವಿ (ವಡ್ಡರ ) ಇತರ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವಂತೆ ನಡೆಸಿರುವ ಹುನ್ನಾರದ ವಿರೋಧಿಸಿ ಬಂಜಾರ ಯುವ ಮೋರ್ಚಾದಿಂದ ಪತ್ರ ಚಳವಳಿ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದತ್ತು ಚವ್ಹಾಣ ಹಾಗೂ ಯುವ ಮುಖಂಡ ರಮೇಶ ಜಾಧವ್ ಮಾತನಾಡಿ, ‘ಸರ್ಕಾರ ಲಂಬಾಣಿ, ಭೂವಿ, ವಡ್ಡರ ಇತರ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವ ಹುನ್ನಾರ ನಡೆಸಿದೆ. ಇದು ಸರಿಯಲ್ಲ ಈ ಎಲ್ಲಾ ಸಮಾಜದಲ್ಲಿ ಸಾಕಷ್ಟು ಬಡವರಿದ್ದಾರೆ. ಅವರಿಗೆ ಇನ್ನೂ ಮೀಸಲಾತಿ ಅವಶ್ಯಕತೆ ಇದೆ ಎಂದರು.

ತಾಂಡಾದ ಹಿರಿಯ ಮುಖಂಡರು, ಬಂಜಾರಾ ಯುವ ಮೋರ್ಚಾ ಕಾರ್ಯಕರ್ತರು, ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.