ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲ: ಎಲ್ಲೆಡೆ ಜನಜಂಗುಳಿ

Last Updated 1 ಜೂನ್ 2021, 1:34 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ನಾಲ್ಕು ದಿನಗಳ ಪೂರ್ಣ ಲಾಕ್‌ಡೌನ್‌ ಸೋಮವಾರ ತೆರವುಗೊಂಡಿತು. ಇದರಿಂದ ಬೆಳಿಗ್ಗೆಯೇ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ನಗರದ ಸೂಪರ್‌ ಮಾರ್ಕೆಟ್, ಎಪಿಎಂಸಿ, ಕಿರಣಾ ಬಜಾರ್, ಶಹಾಬಜಾರ್‌, ಪೊಲೀಸ್ ಚೌಕ್‌, ಮುಸ್ಲಿಂ ಚೌಕ್‌, ರಾಮಮಂದಿರ ಸರ್ಕಲ್‌ ಸೇರಿದಂತೆ ಎಲ್ಲ ತರಕಾರಿ ಮಾರುಕಟ್ಟೆಗಳಲ್ಲಿಯೂ ಜನ ಜಂಗುಳಿ ಉಂಟಾಯಿತು.

ಎಲ್ಲೆಡೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂತು. ರಕ್ಷಣೆಗೆ ನಿಯೋಜನೆಗೊಂಡ ಪೊಲೀಸರು ಹಾಗೂ ಸ್ವಯಂ ಸೇವಕರು ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸಲು ಪರದಾಡಬೇಕಾಯಿತು.

ಮಾರುಕಟ್ಟೆ ತೆರವುಗೊಳಿಸುವ ಧಾವಂತದಲ್ಲಿ ಸಿಕ್ಕಷ್ಟು ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡಿ ವ್ಯಾಪಾರಿಗಳು ಮನೆಯತ್ತ ತೆರಳಿದರು. ಬಹುಪಾಲು ಮಂದಿ ಒಂದು ವಾರಕ್ಕೆ ಸಾಲುವಷ್ಟು ದಿನಸಿಗಳನ್ನು ಖರೀದಿಸಿದ್ದು ಕಂಡುಬಂತು.

ವಾಹನಗಳ ಓಡಾಡ ನಿರ್ಬಂಧಿಸಿದ್ದರಿಂದ ಹಲವು ಮಂದಿ ಖರೀದಿಸಿದ ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು.

ಕೇಂದ್ರ ಬಸ್ ನಿಲ್ದಾಣ, ಎಸ್‌ವಿಪಿ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್‌, ಮುಸ್ಲಿಂ ಚೌಕ್, ರಿಂಗ್ ರಸ್ತೆಯಲ್ಲಿ ಪೊಲೀಸರು ನಾಕಾಬಂದಿಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸಿದರು. ಮಧ್ಯಾಹ್ನದ ಬಳಿಕ ವಾಹನ ಸಂಚಾರ ವಿರಳವಾಗಿದ್ದರಿಂದ ಪೊಲೀಸರೂ ನಿರಾಳರಾದರು.

ನಾಲ್ಕು ದಿನಗಳ ಬಳಿಕ ಲಾಕ್‌ ಸಡಿಲಗೊಳಿಸಿದ್ದರಿಂದ ಜನರು ಅವಶ್ಯಕ ಸಾಮಗ್ರಿಗಳ ಖರೀದಿಗೆ ಹೊರಬಂದರು. ಹೀಗಾಗಿ, ಹೆಚ್ಚಿನ ವಾಹನಗಳ ತಪಾಸಣೆಗೆ ಮುಂದಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT