ಚಿಂಚೋಳಿ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಾದ ಜ್ಯೋತಿ ಶಾಂತಪ್ಪ ಕಾಳೆ ಹಾಗೂ ದತ್ತಕುಮಾರ ಜವಳಕರ್ ನೇತೃತ್ವದಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್ನಲ್ಲಿ 861 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹2.3 ಕೋಟಿ ವ್ಯವಹಾರದ ಮೊತ್ತವಾಗಿದೆ’ ಎಂದು ಕಾನೂನು ಸೇವಾ ಸಮಿತಿ ತಿಳಿಸಿದೆ.

ನ್ಯಾಯಾಲಯದ ಪ್ರಚಲಿತ 820 ಪ್ರಕರಣಗಳು ಹಾಗೂ 41 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 50 ಪ್ರಕರಣಗಳಲ್ಲಿ 28 ಪ್ರಕರಣಗಳನ್ನು ಇತ್ಯರ್ಥಗೊಂಡಿವೆ. 6 ಹಿರಿಯ ನಾಗರಿಕ ಪ್ರಕರಣಗಳು, ಎರಡು ಪತಿ ಪತ್ನಿ ಹೊಂದಾಣಿಕೆ ಮೂಲಕ ಇತ್ಯರ್ಥಪಡಿಸಲಾಗಿದೆ.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 500 ಪ್ರಕರಣಗಳು ಕೈಗೆತ್ತಿಕೊಂಡು ಎನ್ಐ ಆ್ಯಕ್ಟ್ ಚೆಕ್ ಬೌನ್ಸ್ ಪ್ರಕರಣ ಇತ್ಯರ್ಥಪಡಿಸಲಾಗಿದೆ. 125 ಸಿಆರ್ಪಿಸಿ ಪ್ರಕರಣಗಳಲ್ಲಿ ಇ ಮಾತ್ರ ಇತ್ಯರ್ಥವಾಗಿದೆ. 182 ಜನನ ಪ್ರಮಾಣ ಪತ್ರಗಳ ಪ್ರಕರಣ, ಪೊಲೀಸ್ ಇಲಾಖೆಯ 274 ದಂಡ ಪ್ರಕರಣಗಳು ಇತ್ಯರ್ಥವಾಗಿದ್ದು ಒಟ್ಟು 463 ಪ್ರಕರಣ ಮುಕ್ತಾಯವಾಗಿವೆ. ಎಸ್ಬಿಐ ಬ್ಯಾಂಕ್ ವ್ಯಾಜ್ಯ ಪೂರ್ವ 41 ಪ್ರಕರಣಗಳು ರಾಜಿಯಾಗಿದ್ದು, ಕಂದಾಯ ಇಲಾಖೆಯ ಪಿಎಲ್ಸಿ 1818 ಪ್ರಕರಣಗಳು ಮುಕ್ತಾಯಗೊಂಡಿವೆ.

ಹೆಚ್ಚುವರಿ ನ್ಯಾಯಾಲಯದಲ್ಲಿ 354 ಪ್ರಕರಣಗಳನ್ನು ಕೈಗೆತ್ತಿಕೊಂಡು 329 ಪ್ರಕರಣ ಇತ್ಯರ್ಥವಾಗಿರುತ್ತವೆ. ಲೋಕ ಅದಾಲತ್ನಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಮಾಜಿ ಅಧ್ಯಕ್ಷ ಬಿ.ಸುದರ್ಶನ, ಹಿರಿಯ ವಕೀಲ ಜಗನ್ನಾಥ ಅಗ್ನಿಹೋತ್ರಿ, ಶಿವಶರಣಪ್ಪ ಜಾಪಟ್ಟಿ, ರಾಜೇಂದ್ರ ವರ್ಮಾ ಸೇರಿದಂತೆ ವಿವಿಧ ವಕೀಲರು ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.