ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ಮಹಾಲಕ್ಷ್ಮಿಯ ಶಿಲಾಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಸಹಸ್ರಾರು ಭಕ್ತರ ನಡುವೆ ಸಡಗರ–ಸಂಭ್ರಮದಿಂದ ಜರಗಿತು.

ಮೆರವಣಿಗೆಯಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ತಲೆಯ ಮೇಲೆ ಪವಿತ್ರ ಜಲವಿದ್ದ ಕುಂಭಗಳನ್ನು ಹೊತ್ತು ತಮಟೆ, ಮಂಗಳವಾದ್ಯಗಳೊಂದಿಗೆ ಹಾಕಿದರು. ಮೆರವಣಿಗೆಯ ಸಮಯದಲ್ಲಿ ಪ್ರತಿ ಮನೆಮನೆಗೂ ಲಕ್ಷ್ಮೀದೇವಿಯ ಮೆರವಣಿಗೆ ಬರುತ್ತಿದ್ದಂತೆ ಭಕ್ತರು ನೀರು ಹಾಕಿ ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು. ಮೆರವಣಿಗೆಯುದ್ದಕ್ಕೂ ಲಕ್ಷ್ಮಿದೇವಿಯ ಜೈಘೋಷ ಮೊಳಗಿದವು.

ಅಕ್ಕಲಕೋಟ ತಾಲ್ಲೂಕಿನ ಕಲ್ಲಿಪ್ಪರಗಿ ಸಂಸ್ಥಾನ ಹಿರೇಮಠದ ಗುರು ಶಾಂತಲಿಂಗ ಶಿವಾಚಾರ್ಯರು ಭಕ್ತ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಮಹಾಲಕ್ಷ್ಮಿ ದೇವಸ್ಥಾನದ ಲೋಕಾರ್ಪಣೆ ಸಮಿತಿಯ ಮುಖಂಡರಾದ ಸಿದ್ದು ರಾಮಚಂದ್ರ ಚಲಗೇರಿ, ಅರವಿಂದ ಎಸ್.ದೊಡ್ಡಮನಿ, ಹಣಮಯ್ಯ ಗುತ್ತೇದಾರ, ಶರಣಪ್ಪ ದೊಡ್ಡಮನಿ, ಸುಭಾಷ್ ಗುತ್ತೇದಾರ, ಶ್ರೀಮಂತ ಪಾಟೀಲ, ಗೌರಿಶಂಕರ ಸೊನ್ನ, ಅನಿಲ್ ಪೋದ್ದಾರ್, ಸಿದ್ದಣ್ಣ ಹಸರಗುಂಡಗಿ, ವಿಜಯಕುಮಾರ ಬಸವಣ್ಣಪ್ಪ ಪಾಟೀಲ ಇತರರು ಇದ್ದರು. ಮುಖ್ಯ ಶಿಕ್ಷಕ ಅಣ್ಣಾರಾಯ ಪಾಟೀಲ ಸ್ವಾಗತಿಸಿದರು. ಶಿವಶರಣಪ್ಪ ಕಗ್ಗೋಡ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.