ಭಗವಾನ ಮಹಾವೀರ ಜಯಂತಿ ಆಚರಣೆ

ಭಾನುವಾರ, ಏಪ್ರಿಲ್ 21, 2019
26 °C

ಭಗವಾನ ಮಹಾವೀರ ಜಯಂತಿ ಆಚರಣೆ

Published:
Updated:
Prajavani

ಕಲಬುರ್ಗಿ: ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಗವಾನ ಮಹಾವೀರ ಜಯಂತಿಯನ್ನು ಬುಧವಾರ ಇಲ್ಲಿ ಸರಳವಾಗಿ ಆಚರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಹಾಗೂ ಗಣ್ಯರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಮಹಾವೀರ ಜೈನ ಮಂದಿರ ಅಧ್ಯಕ್ಷ ಚಂದ್ರಮೋಹನ ಶಹಾ, ಆದಿನಾಥ ಜೈನ ಮಂದಿರದ ಅಧ್ಯಕ್ಷ ನಾಗನಾಥ ಚಿಂಧೆ, ಉಪಾಧ್ಯಕ್ಷ ಸುಶೀಲಕುಮಾರ ಕೊಠಾರಿ, ಕಲಾವಿದ ಬಾಬುರಾವ ಕೋಬಾಳ, ಸುಬೋಧ್‌ ಶಹಾ, ಕಾರ್ಯದರ್ಶಿ ಡಾ.ಶ್ರೇಯಮ್ಸ್ ಕೊಠಾರಿ, ಡಾ.ಪಿ.ವಿ. ಕೋಠಾರಿ ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !