ಕಲಬುರಗಿ: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ಗೆ ₹ 60 ಏರಿಕೆ ಮಾಡಿದ್ದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಿಗೆಯ ಒಲೆ ಹಚ್ಚಿ ರೊಟ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಡುಗೆ ಸಿಲಿಂಡರ್ ದರವನ್ನು ಏಕಾಏಕಿ ಏರಿಕೆ ಮಾಡಿದ್ದರಿಂದ ಬಡವರು, ಮಧ್ಯಮ ವರ್ಗದವರಿಗೆ ಖರ್ಚು ಭರಿಸುವುದೇ ಸವಾಲಾಗುತ್ತದೆ. ಅನಿವಾರ್ಯವಾಗಿ ಅಡುಗೆ ಅನಿಲ ಸಿಲಿಂಡರ್ ಬಿಟ್ಟು ಕಟ್ಟಿಗೆ ಒಲೆಯತ್ತ ಹೊರಳಬೇಕಾಗುತ್ತದೆ. ಇದರಿಂದಾಗಿ ಮತ್ತೆ ಅಡುಗೆ ಮನೆ ಹೊಗೆ ಆಗುವುದರಿಂದ ಮಹಿಳೆಯರಿಗೆ ಕಾಯಿಲೆಗಳು ಬರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಲಿ ಅಡುಗೆ ಅನಿಲ ಸಿಲಿಂಡರ್ಗಳನ್ನು ರಸ್ತೆಯ ಮೇಲೆ ಇಟ್ಟ ಕಾರ್ಯಕರ್ತೆಯರು, ಕಟ್ಟಿಗೆಯನ್ನು ಉರಿಸಿ ಅದರ ಮೇಲೆ ಹಂಚಿಟ್ಟು ರೊಟ್ಟಿ ತಯಾರಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಸಿಂಗೆ ಮಾತನಾಡಿ, ‘ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಬೆಲೆಗಳನ್ನು ಏರಿಸಿ ಬಡಜನತೆಗೆ ಅತ್ಯಂತ ಕಷ್ಟ ಕಾಲದ ಆರ್ಥಿಕ ದುಃಸ್ಥಿತಿಗೆ ತಳ್ಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ₹ 400 ರೂಪಾಯಿ ಇದ್ದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ₹ 1100 ಏರಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದನ್ನು ಪ್ರತಿಭಟಿಸಿ ಕಾಂಗ್ರೆಸ್ ದೇಶದ ಉದ್ದಗಲಕ್ಕೂ ಬೀದಿಗಿಳಿದು ಪ್ರತಿಭಟಿಸಿದರ ಪರಿಣಾಮ ಸಿಲಿಂಡರ್ ಬೆಲೆಯಲ್ಲಿ ₹ 200 ಕಡಿಮೆ ಮಾಡುವ ನಾಟಕವಾಡಿತ್ತು. ಆದರೆ, ಈಗ ಮತ್ತೆ ವಿನಾಕಾರಣ ಪ್ರತಿ ಸಿಲೆಂಡರ್ ಬೆಲೆಯಲ್ಲಿ ಒಮ್ಮೆಲೇ ₹60 ಹೆಚ್ಚಿಸಿ ಬಡಜನತೆಯ ಮೇಲೆ ಅನ್ಯಾಯದ ಆರ್ಥಿಕ ಹೊರೆಯನ್ನು ಹೇರಿದೆ. ಇದು ದೇಶದ ಬಡವರ ಹಗಲು ದರೋಡೆಗೆ ದಾರಿ ಮಾಡಿ ಕೊಟ್ಟಿದೆ’ ಎಂದರು.

ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಸಂಗೀತಾ ಪಾಟೀಲ, ಸಾಹೇರಾ ಬಾನು, ಶಹನಾಜ್ ಅಕ್ತರ್, ಮಂಜುಳಾ ಫರಹತಾಬಾದ್ ಸೇರಿದಂತೆ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

‘ನೆಲಕ್ಕೆ ಬಿದ್ದವನಿಗೆ ಒದ್ದಂತೆ’ ಕಲಬುರಗಿ: ಕೇಂದ್ರ ಸರ್ಕಾರ ಎಲ್ಪಿಜಿ ದರ ಹೆಚ್ಚಳ ಮಾಡಿರುವ ಕ್ರಮವು ನೆಲಕ್ಕೆ ಬಿದ್ದ ಅಸಹಾಯಕನಿಗೆ ಒದ್ದಂತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಆರೋಪಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಮುಖಂಡರು ‘ಮೊದಲೇ ಜನಸಾಮಾನ್ಯರು ಹಣದುಬ್ಬರದಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ₹ 60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ₹ 114ಕ್ಕೆ ಏರಿಕೆ ಮಾಡಿದ ಕ್ರಮವು ಜನವಿರೋಧಿಯಾದುದು’ ಎಂದು ಟೀಕಿಸಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬೆಲೆ ಏರಿಕೆಯ ಭಾರವನ್ನು ಹೊರಲು ದೇಶದ ಜನತೆ ತಯಾರಿರಬೇಕು ಎಂಬ ಹೇಳಿಕೆ ಖಂಡನೀಯ. ಈ ಮೂಲಕ ಅವರು ಬಂಡವಾಳಶಾಹಿಗಳ ಪರ ಇದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು. ಪಕ್ಷದ ರಾಜ್ಯ ಸಮಿತಿ ಸದಸ್ಯ ಮೌಲಾ ಮುಲ್ಲಾ ಜಿಲ್ಲಾ ಸಹಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ ಪದ್ಮಾವತಿ ಮಾಲಿಪಾಟೀಲ ನಗರ ಕಾರ್ಯದರ್ಶಿ ಸಾಜೀದ್ ಅಹ್ಮದ್ ಖಜಾಂಚಿ ಭೀಮಾಶಂಕರ ಮಾಡಿಯಾಳ ಮುಖಂಡರಾದ ಹಣಮಂತರಾಯ ಅಟ್ಟೂರ ಶಿವಲಿಂಗಮ್ಮ ಲೆಂಗಟಿಕರ್ ಶರಣಮ್ಮ ಪೂಜಾರಿ ತಿಪ್ಪಣ್ಣ ಯಂಪುರೆ ಮಹ್ಮದ್ ಹುಸೇನ್ ಮಲ್ಲಿಕಾರ್ಜುನ ಕೊಲ್ಲೂರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.