ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ರೈಲಿಗೆ ಸಿಲುಕಿ ವ್ಯಕ್ತಿ ಸಾವು

Last Updated 22 ಸೆಪ್ಟೆಂಬರ್ 2022, 5:17 IST
ಅಕ್ಷರ ಗಾತ್ರ

ವಾಡಿ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಅವಘಡ ವಾಡಿ ರೈಲು ನಿಲ್ದಾಣದಲ್ಲಿಬುಧವಾರ ಸಂಭವಿಸಿದೆ.

ಮುಂಬೈ ಮೂಲದ ಅಯ್ಯಪ್ಪ ರಾಜ್ ರೆಡ್ಡಿಯಾರ್ (56) ಮೃತ ವ್ಯಕ್ತಿ.

ನಾಗರಕೋಯಿಲ್ ರೈಲು
ಮೂಲಕ ಕುಟುಂಬಸ್ಥರ ಜೊತೆಗೆ ಮುಂಬೈನಿಂದ ಮಧುರೈಗೆ ತೆರಳುತ್ತಿದ್ದರು. ಪಟ್ಟಣದ ನಿಲ್ದಾಣದಲ್ಲಿ
ಆಹಾರ ಪೊಟ್ಟಣ ತೆಗೆದುಕೊಳ್ಳಲು ಇಳಿದಿದ್ದರು. ರೈಲು ತೆರಳುತ್ತಿರುವುದು ಕಂಡು ಅವಸರದಲ್ಲಿ ರೈಲು ಹತ್ತುವ ವೇಳೆ ಕಾಲು ಜಾರಿ ಬಿದ್ದು, ರೈಲಿನ ಚಕ್ರಕ್ಕೆ ಸಿಲುಕಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ಎರಡೂ ಕಾಲು ಹಾಗೂ ಒಂದು ಕೈ ತುಂಡಾಗಿವೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ತಕ್ಷಣವೇ ವಾಡಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದಿದ್ದಾರೆ. ಯಾದಗಿರಿ ರೈಲು ನಿಲ್ದಾಣ ದಾಟಿದ ಬಳಿಕ ಈ ವಿಷಯ ಕುಟುಂಬಸ್ಥರಿಗೆ ಗೊತ್ತಾಗಿದೆ.

ವಾಡಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ಐ ಮಹೆಮೂದ್ ಪಾಷಾ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಸೇಂದಿ ಜಪ್ತಿ

ಅಬಕಾರಿ ಅಧಿಕಾರಿಗಳು ರೈಲಿನಲ್ಲಿ ಕಲಬೆರಕೆ ಸೇಂದಿ ಸಾಗಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ, 20 ಲೀಟರ್ ಸೇಂದಿ ಜಪ್ತಿ ಮಾಡಿದ ಘಟನೆ ಬುಧವಾರ ನಡೆದಿದೆ.

ವಾಡಿಯ ವಿಜಯನಗರದ ಸುರೇಶ ಹಣಮಂತ ಪೂಜಾರಿ ಬಂಧಿತ ಆರೋಪಿ.

ರಾಯಚೂರು- ವಿಜಯಪುರ ಪ್ಯಾಸೇಂಜರ್ ರೈಲು ಮೂಲಕ ಕೃಷ್ಣಾದಿಂದ ವಾಡಿಗೆ ಕಲಬೆರಕೆ ಸೇಂದಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ, ಸೇಂದಿ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ರಮೇಶ ಬಿರಾದಾರ, ಮಹೇಶ ಕುಮಾರ, ವಿಜಯಲಕ್ಷ್ಮಿ, ಶಿವಾನಂದ ಶರಣಬಸಪ್ಪ, ಮಹಾಂತೇಶ, ಸುಭಾಷ್ ಇದ್ದರು. ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬಕಾರಿ ದಾಳಿ: ಕಲಬೆರಕೆ ಸೇಂದಿ ಜಪ್ತಿ

ಚಿತ್ತಾಪುರ: ಅಬಕಾರಿ ಅಧಿಕಾರಿಗಳು ರೈಲಿನಲ್ಲಿ ಕಲಬೆರಕೆ ಸೇಂದಿ ಸಾಗಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ, 20 ಲೀಟರ್ ಸೇಂದಿ ಜಪ್ತಿ ಮಾಡಿದ ಘಟನೆ ಬುಧವಾರ ನಡೆದಿದೆ.

ವಾಡಿಯ ವಿಜಯನಗರದ ಸುರೇಶ ಹಣಮಂತ ಪೂಜಾರಿ ಬಂಧಿತ ಆರೋಪಿ.

ರಾಯಚೂರು-ವಿಜಯಪುರ ಪ್ಯಾಸೇಂಜರ್ ರೈಲು ಮೂಲಕ ಕೃಷ್ಣಾದಿಂದ ವಾಡಿಗೆ ಕಲಬೆರಕೆ ಸೇಂದಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ, ಸೇಂದಿ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ರಮೇಶ ಬಿರಾದಾರ, ಮಹೇಶಕುಮಾರ, ವಿಜಯಲಕ್ಷ್ಮಿ, ಶಿವಾನಂದ ಶರಣಬಸಪ್ಪ, ಮಹಾಂತೇಶ, ಸುಭಾಷ್ ಇದ್ದರು. ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT