ಸೋಮವಾರ, ಜೂನ್ 21, 2021
24 °C

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಮಾರ್ಚ್ 26ರಂದು ರಾತ್ರಿ ಸಂಭವಿಸಿದ್ದ ಕಾರು- ಟ್ರ್ಯಾಕ್ಟರ್ ಮಧ್ಯದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ನವನಿಹಾಳ ಗ್ರಾಮದ ಶ್ರೀಕಾಂತ ಅಂಬಾರಾಯ ಗುಂಡೂರ (24) ಭಾನುವಾರ ಮೃತಪಟ್ಟರು.

ಶ್ರೀಕಾಂತ ಅವರೊಂದಿಗೆ ನವನಿಹಾಳ ಗ್ರಾಮದ ಶ್ರೀನಾಥ ಸುಭಾಷ ಬಿರಾದಾರ (26), ನಾಗರಾಜ ಬಸಂತರಾಯ ಬಿರಾದಾರ (28), ಹಾಗೂ ಡೋರ ಜಂಬಗಾದ ವಿಜಯಕುಮಾರ ಶ್ರೀಮಂತ (27), ಚಂದ್ರಕಾಂತ ದೇವಿಂದ್ರಪ್ಪ (27) ಸೇರಿ ರೇಣುಕಾಚಾರ್ಯ ಜಯಂತಿ ನಿಮಿತ್ತ ಕಾರಿನಲ್ಲಿ ತೆಲಂಗಾಣದ ಕೊಲ್ಲಿಪಾಕಿಗೆ ತೆರಳುತ್ತಿದ್ದರು. ಡೊಂಗರಗಾಂವ ಕ್ರಾಸ್ ಬಳಿ ಮೇವು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿ ಎದುರು ಬದಿಯ ಆಸನದಲ್ಲಿ ಕುಳಿತಿದ್ದ ಶ್ರೀಕಾಂತ ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿತ್ತು. ದಿನ ಕಳೆದರೂ ಚೇತರಿಕೆ ಕಾಣಲಿಲ್ಲ. ಭಾನುವಾರ ಕೊನೆಯುಸಿರೆಳೆದರು. ಉಳಿದವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರ್ಯಾಕ್ಟರ್ ಚಾಲಕ ಡೋರ್ ಜಂಬಗಾದ ಹುಸೇನಸಾಬ್ ಅಬ್ಬಾಸ ಅಲಿ (50) ಅವರಿಗೂ ತೀವ್ರ ಗಾಯಗಳಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು