ತಾಲ್ಲೂಕಿನ ರಾಜೋಳಿ ಗ್ರಾಮದ ರಾಜೇಂದ್ರ ಬಸವಂತರಾವ (62) ಮೃತರು. ಕುರಕುಂಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜೇಂದ್ರ ಅವರು ಮಗಳನ್ನು ಮಾತನಾಡಿಸಲು ರಾಜೋಳಿ ಗ್ರಾಮದಿಂದ ಕುರಕುಂಟಾ ಗ್ರಾಮಕ್ಕೆ ಬಂದಿದ್ದರು. ಮಗಳ ಮನೆಯಲ್ಲಿ ತಂಗಿದ್ದು, ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮಾಳಿಗೆ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮನೆಯ ಸುತ್ತಲೂ ಜನ ನೆರೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.