ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿನಿಂದ ರಾವೂರ ಗ್ರಾಮ‌ದ ವ್ಯಕ್ತಿ ಸಾವು

ಹೊಸದಾಗಿ 196 ಪ್ರಕರಣ: 108 ಜನ ಗುಣಮುಖ
Last Updated 11 ಆಗಸ್ಟ್ 2020, 4:07 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾಸೋಂಕಿನಿಂದ ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದ ಗಣೇಶ ನಗರದ 57 ವರ್ಷದ ಪುರುಷ ನಿಧನರಾಗಿರುವ ಬಗ್ಗೆ ಸೋಮವಾರ ದೃಢವಾಗಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಇದೂವರೆಗೆ ಮೃತರಾದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು ಆಗಸ್ಟ್‌ 5ರಂದು ಆಸ್ಪತ್ರೆಗೆ ದಾಖಲಾಗಿ ಆ.9 ರಂದು ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

196 ಜನರಿಗೆ ಸೋಂಕು: ಸೋಮವಾರ ಜಿಲ್ಲೆಯ ಐವರು ಮಕ್ಕಳು, 70 ಮಹಿಳೆಯರು ಸೇರಿದಂತೆ 196 ಜನರಲ್ಲಿ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ.

ಜಿಮ್ಸ್ ಆಸ್ಪತ್ರೆಯ 35 ವರ್ಷದ ಸಿಬ್ಬಂದಿ, ಜಿಲ್ಲಾ ನ್ಯಾಯಾಲಯದ 38 ವರ್ಷದ ಸಿಬ್ಬಂದಿ, ದೇವಲಗಾಣಗಾಪುರ ಪೊಲೀಸ್‌ ಠಾಣೆಯ 18 ವರ್ಷದ ಉದ್ಯೋಗಿ, ಜೇವರ್ಗಿ ಸಿಂಡಿಕೇಟ್‌ ಬ್ಯಾಂಕಿನ 23 ಹಾಗೂ 27 ವರ್ಷದ ಸಿಬ್ಬಂದಿ, ನಾಗನಹಳ್ಳಿಯ ಪೊಲೀಸ್‌ ತರಬೇತಿ ಕೇಂದ್ರದ 26 ವರ್ಷದ ತರಬೇತಿ ನಿರತ ಕಾನ್‌ಸ್ಟೆಬಲ್, ಜಿಮ್ಸ್‌ನ 24 ವರ್ಷದ ವೈದ್ಯಕೀಯ ಸಿಬ್ಬಂದಿ, ಜಿಮ್ಸ್‌ ವಸತಿ ಗೃಹದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 7537ಕ್ಕೆ ಏರಿದ್ದು, ಸೋಮವಾರ ಒಂದೇ ದಿನ 108 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ 4837 ಜನ ಗುಣಮುಖರಾದಂತಾಗಿದೆ. 2559 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT