ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಲ ಗಾಣಗಾಪುರ; ನದಿಯಲ್ಲಿ ಕೊಚ್ಚಿಹೋದ ಯುವಕ

Published : 19 ಆಗಸ್ಟ್ 2024, 16:05 IST
Last Updated : 19 ಆಗಸ್ಟ್ 2024, 16:05 IST
ಫಾಲೋ ಮಾಡಿ
Comments

ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಹೈದರಾಬಾದ್‌ನಿಂದ ಆಗಮಿಸಿದ್ದ ಶ್ರವಣಕುಮಾರ ಎಂ.(30) ಎಂಬ ಯುವಕ ಸೋಮವಾರ ಬೆಳಗಿನ ಜಾವ ಭೀಮಾ ನದಿಗೆ ಸ್ನಾನಕ್ಕಿಳಿದ ವೇಳೆ ಕಾಲುಜಾರಿ ನೀರುಪಾಲಾದ ಬಗ್ಗೆ ವರದಿಯಾಗಿದೆ.

ಭಾನುವಾರ ಸಂಜೆ ಹೈದರಾಬಾದ್‌ನಿಂದ ಶ್ರವಣಕುಮಾರ ಗೆಳೆಯರೊಂದಿಗೆ ದೇವಲ ಗಾಣಗಾಪುರಕ್ಕೆ ಬಂದಿದ್ದರು. ಸೋಮವಾರ ನಸುಕಿನ ಜಾವ 5 ಗಂಟೆಗೆ ನದಿಯಲ್ಲಿ ಸ್ನಾನಕ್ಕಿಳಿದಾಗ ಕಾಲು ಜಾರಿ ಬಿದ್ದಿದ್ದಾರೆ.

ಸ್ನೇಹಿತರು ಗಮನಿಸಿ ತಕ್ಷಣ ಸಹಾಯಕ್ಕೆ ಅಲ್ಲಿನ ಜನರನ್ನು ಕರೆಯುವಷ್ಟರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಅಶೋಕ್ ಜಮಾದಾರ, ಮುಬಾರಕ್ ಇಂಡಿಕರ, ನಾಗಯ್ಯ ದಿಕ್ಸಂಗಿ, ರೇವಣಸಿದ್ದಯ್ಯ ಮಠಮತಿ, ಮಹಾಂತೇಶ ಜಮಾದಾರ, ಶಿವಾನಂದ ಕುಂಬಾರ, ಸದಾನಂದ ಸಿಂಪಿ, ಸಿದ್ಧಲಿಂಗ ಪತ್ತಾರ ಸೇರಿದಂತೆ ದೇವಲ ಗಾಣಗಾಪುರ ಪೋಲಿಸ್ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಭೀಮಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿರುವುದು
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಭೀಮಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT