ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಹಕ್ಕುಗಳಿಗಾಗಿ ಹೋರಾಡಿದ ಮಾನಪಡೆ

ಅಂಬಲಗಾದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಎಸ್. ವರಲಕ್ಷ್ಮಿ
Last Updated 30 ನವೆಂಬರ್ 2020, 1:33 IST
ಅಕ್ಷರ ಗಾತ್ರ

ಕಲಬುರ್ಗಿ: ತಮ್ಮ ಕೊನೆ ಉಸಿರಿನವರೆಗೂ ರೈತ ಹೋರಾಟಗಾರ ಮಾರುತಿ ಮಾನಪಡೆ ಅವರು ಬಡವರು, ಶೋಷಿತರ ಹಕ್ಕುಗಳಿಗಾಗಿ ಹೋರಾಡಿದರು ಎಂದು ಸಿಯುಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು ಸ್ಮರಿಸಿದರು.

ಕಮಲಾಪುರ ತಾಲ್ಲೂಕಿನ ಅಂಬಲಗಾ ಗ್ರಾಮದ ಸಂತೆ ಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ದಿ.ಮಾರುತಿ ಮಾನಪಡೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಹೊಸ ಸ್ವರೂಪವನ್ನು ಕೊಟ್ಟಿದ್ದಾರೆ, ಹೆಣ್ಣು ಮಕ್ಕಳಿಗೆ ಸಮಾನತೆ ಬೇಕು ಎಂದು ಹೇಳಿದ್ದರು. ಮಾನಪಡೆ ಅವರು ಹೇಳಿದ್ದನ್ನು ಮಾಡುತ್ತಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕು ಎಂಬುದು ಅವರ ಧ್ಯೇಯ ವಾಕ್ಯವಾಗಿತ್ತು. ಹಣ ಇಲ್ಲದೆ ಹೋರಾಟ ಮಾಡುವ ವ್ಯಕ್ತಿಯಾಗಿದ್ದರು. ಇಂದಿನ ಮಕ್ಕಳು ಮಾನಪಡೆಯವರ ಹಾಗೆ ಬೆಳೆಯಬೇಕು. ಕೊರೊನಾದಿಂದ ಬಡತನ, ನಿರುದ್ಯೋಗ ಬಂದಿದೆ. ಹಾಗಾಗಿ ಹೋರಾಟ ಅವಶ್ಯಕತೆ ಇದೆ. ಕೆಂಬಾವುಟ ಎಂದರೆ ಅನ್ಯಾಯದ ವಿರುದ್ಧದ ಹೋರಾಟ ಮಾಡುವುದು ಎಂದರ್ಥ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಮಾತನಾಡಿ, 1986–87ರ ವೇಳೆಯಲ್ಲಿ ಅವರು ಬಿ.ಎ. ಓದುತ್ತಿದ್ದಾಗ, ಮಾನಪಡೆ ಅವರು ಅಂಬಲಗಾ ಗ್ರಾಮಕ್ಕೆ ಕರೆದುಕೊಂಡು ಬಂದು ಹುಡುಗ ಒಳ್ಳೆಯ ಭಾಷಣ ಮಾತ್ತಾನೆ ಎಂದು ಪರಿಚಯಿಸಿ, ರೈತ ಹೋರಾಟದಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು.

ಶಿಕ್ಷಕ ನಾಗೇಂದ್ರಪ್ಪಾ ಅವರಾದ ಮಾತನಾಡಿ, ಮಾನಪಡೆಯವರು ಸ್ವ ಸಾಮರ್ಥ್ಯ ಸಂಘರ್ಷದಿಂದ ಬೆಳೆದು ಬಂದಿದ್ದಾರೆ. ಸಂಘರ್ಷದ ದಾರಿಯನ್ನು ಹಿಡಿಯಬೇಕಾದರೆ ಮಾನಪಡೆಯವರನ್ನು ಅನುಕರಣೆ ಮಾಡಬೇಕು. 150 ಜನರ ಶಸ್ತ್ರಾಸ್ತ್ರಗಳನ್ನು ಎದುರಿಸುವ ಶಕ್ತಿ ಮಾನಪಡೆ ಅವರಿಗೆ ಇತ್ತು. ಅನೇಕ ದಾಳಿ ಮತ್ತು ದಬ್ಬಾಳಿಕೆಗಳನ್ನು ಎದುರಿಸಿ ಹೋರಾಡಿದರು. ಮಾನಪಡೆಯವರ ಜೀವ ಮತ್ತೆ ಬರುವುದಿಲ್ಲ. ಆದರೆ ಅವರ ಆದರ್ಶಗಳನ್ನು, ಹೋರಾಟದ ಸಿದ್ಧಾಂತಗಳನ್ನು ಮುಂದುವರಿಸಬೇಕು. ಹೋರಾಟ ಮತ್ತು ಚಳುವಳಿಯಲ್ಲಿ ಮಾನಪಡೆಯವರ ಜೀವ ಇದೆ ಎಂದರು.

ಮಾನಪಡೆ ಹಿರಿಯ ಮಗ ಸುನೀಲ ಮಾನಪಡೆ, ಸಿಪಿಎಂ ಮುಖಂಡ ರೇವಣಸಿದ್ದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಪಾಟೀಲ, ಜಿಲ್ಲಾ ಪಂಚಾಯಿತಿಮಾಜಿ ಸದಸ್ಯ ಮೇಘರಾಜ ಕಠಾರೆ ಮಾತನಾಡಿದರು.

ಮೋಹನಂದ ಮರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣರಾವ್ ಮೆಗಪ್ಪಿ ಸ್ವಾಗತಿಸಿದರು. ಬಂಡೆಪ್ಪ ಚೀಲಿ ಕಾರ್ಯಕ್ರ ನಿರ್ವಹಣೆ ಮಾಡಿದರು.

ಗ್ರಾಮದ ಹಿರಿಯರಾದ ಕಲ್ಲಪ್ಪ ಚೀಲಿ, ಕಲ್ಯಾಣರಾವ ಗೊನಕೆ, ನೀಲಕಂಠ ದುರ್ಗೆ, ಶಿವಪುತ್ರಪ್ಪ ಮೆಗಪ್ಪಿ, ಮಲ್ಲಣ್ಣ ಸರಡೆ, ಮಲ್ಲಿನಾಥ ಪಾಟೀಲ ಕುದಮೂಡ, ಚಿಂಚನಸೂರದ ಪಾಂಡುರಂಗ ಮಾವಿನಕರ್, ಲೇಂಗಟಿಯ ಗುಂಡಪ್ಪ ಕೊಳ್ಳರೆ, ಅಂಬಲಗಾ ಗ್ರಾಮದ ರಾಜಣ್ಣ ಮಾಚಿ, ಶರಣಪ್ಪ ಹೊಸಮನಿ, ಬಸವರಾಜ ಸರಡಗಿ ಸುರೇಶ ಪಂಚಾಳ, ಕಲ್ಲಪ್ಪ ಕಂಠಿ, ಬೀರಪ್ಪಾ ಗಡ್ಡದ, ಫಕೀರ ಸಾಬ್ ಭಗವಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT