ವಾಡಿ (ಕಲಬುರಗಿ ಜಿಲ್ಲೆ): ಲಾಡ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಚೂರು ಡಿಗ್ಗಿ ತಾಂಡಾದಲ್ಲಿ ಬುಧವಾರ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನ ಜಾವ ತಾಂಡಾದಲ್ಲಿ ಹೈ ಡ್ರಾಮಾ ನಡೆದಿದೆ.

ಶವ ಸಂಸ್ಕಾರ ನಡೆಸಿ ಸೂಕ್ತ ಪರಿಹಾರ ಒದಗಿಸಿ ಕೊಡುವುದಾಗಿ ಸಚಿವರು ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದರೂ ಮಾತು ಕೇಳಲಿಲ್ಲ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಶವಸಂಸ್ಕಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಟೆಂಟ್ ಹಾಕಿ ಕುಳಿತಿರುವ ಸ್ಥಳೀಯರು ಅಧಿಕಾರಿಗಳ ಮಾತು ಕೇಳದೆ ತಾಂಡಾದಲ್ಲೇ ವಾಸ್ತವ್ಯ ಹೂಡಿದ್ದ ಮಣಿಕಂಠ ರಾಠೋಡನನ್ನು ಮಧ್ಯರಾತ್ರಿ 12.30ಕ್ಕೆ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ತಮ್ಮ ವಾಹನದಲ್ಲಿ ಕರೆದೋಯ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಪೊಲೀಸರ ವಾಹನ ತಡೆಯಲು ಯತ್ನಿಸಿದರು.

ವಾಹನದ ಎದುರು ಕಟ್ಟಿಗೆ, ಕಲ್ಲು ಸುರುವಿ ತಡೆಯಲು ಯತ್ನಿಸಿದ ಘಟನೆ ಜರುಗಿತು. ಪೊಲೀಸರೊಂದಿಗೆ ವಾದಕ್ಕೆ ಇಳಿದ ಬೆಳವಣಿಗೆಯೂ ನಡೆಯಿತು. ನೇರವಾಗಿ ಮಣಿಕಂಠನನ್ನು ಕಲಬುರಗಿಗೆ ಕರೆದೊಯ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ನಂತರ ಬೆಳಿಗ್ಗೆ 5 ಗಂಟೆಗೆ ಶವವನ್ನು ಪುನಃ ಮರಣೋತ್ತರ ಪರೀಕ್ಷೆ ನಡೆಸಲು ವಾಡಿ ಸಮುದಾಯ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಇದರಿಂದ ತಾಂಡಾದಲ್ಲಿ ಈಗ ಬಿಗುವಿನ ವಾತಾವರಣ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.