ಅಫಜಲಪುರ: ‘ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಏ.29 ರಿಂದ ಮೇ 2ರವರೆಗೆ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ‘29ರ ಬುಧವಾರದಂದು ಸಂಜೆ ಶಿವಬಾಳನಗರದ ಭಕ್ತರಿಂದ ನಡೆಯುವ ನಂದಿಕೋಲು ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಿ ಮಂದಿರಕ್ಕೆ ಆಗಮಿಸುವುದು. 30ರಂದು ಯಲ್ಲಮ್ಮ ದೇವಿ ಬಾಸಿಂಗ ಮೆರವಣಿಗೆ ರಾತ್ರಿ 9 ಗಂಟೆಗೆ ಮಂದಿರಕ್ಕೆ ತಲುಪಲಿದೆ’ ಎಂದು ಹೇಳಿದ್ದಾರೆ.

‘ಮೇ 1ರ ಆಗಿ ಹುಣ್ಣಿಮೆಯಂದು ಬೆಳಿಗ್ಗೆ 5 ಗಂಟೆಗೆ ಪಡಸಾವಳಗಿ ಮತ್ತು ಉದಗಿರಮಠದ ಶಂಭುಲಿಂಗ ಶಿವಾಚಾರ್ಯರಿಂದ ದೇವಿಗೆ ರುದ್ರಾಭಿಷೇಕ ನಡೆಯಲಿದೆ ದೇವಿಯ ಪಲ್ಲಕ್ಕಿ ಮೆರವಣಿಗೆ ಭೀಮಾ ನದಿಯಲ್ಲಿರುವ ದೇವಿಯ ಮಂದಿರಕ್ಕೆ ತಲುಪುವುದು’ ಎಂದು ಯಲ್ಲಮ್ಮ ದೇವಿ ಚಾರಿಟಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-31-2042117169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.