ಕಲಬುರಗಿ: ‘ಆಳಂದ ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾ ಆವರಣದ ರಾಘವ ಚೈತನ್ಯ ಲಿಂಗವಿರುವ ಸ್ಥಳದಲ್ಲಿ ಯಾವುದೇ ತಾತ್ಕಾಲಿಕ ಹಾಗೂ ಶಾಶ್ವತ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ನ ಆದೇಶವಿದ್ದರೂ ಲಿಂಗವಿರುವ ಸ್ಥಳದ ಸುತ್ತಲೂ ಮಜರ್ ರೀತಿಯ ಕಟ್ಟೆ ನಿರ್ಮಿಸಿ ಲಿಂಗದ ಮೇಲೆ ಚಾದರ್ ಹಾಕಲಾಗಿದೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷರೂ ಆದ ಆಂದೋಲದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2025ರಲ್ಲಿ ಪೂಜೆಗೆ ಹೋದ ಸಂದರ್ಭದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ಕೂಡಿ ಹಾಕಿ ಮಜರ್ ರೀತಿ ನಿರ್ಮಿಸಿ, ಲಿಂಗದ ಮೇಲೆ ಚಾದರ್ ಹೊದಿಸಲಾಗಿತ್ತು. ಈಚೆಗೆ ಪೂಜೆಗೆ ಹೋಗಿ ನೋಡಿದಾಗ ಲಿಂಗದ ಸುತ್ತಲೂ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೇಳಿದರೆ ಮೂರು ದಿನಗಳ ಕಾಲ ಮಾತ್ರ ಅಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ ಎಂಬ ಹಾರಕೆ ಉತ್ತರ ನೀಡುತ್ತಾರೆ’ ಎಂದು ದೂರಿದರು.

‘ಕಾನೂನು ಗಾಳಿಗೆ ತೂರಿ ಜಿಲ್ಲಾಡಳಿತ ಕೆಲಸ ಮಾಡುತ್ತಿದ್ದು, ದೂರು ನೀಡಿದಾಗಲಾದರೂ ಪರಿಶೀಲನೆ ಮಾಡುವ ಕೆಲಸ ಮಾಡಿಲ್ಲ. ಇಷ್ಟು ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ರಾಘವ ಚೈತನ್ಯ ಲಿಂಗದ ಪೂಜೆಗೆ ಹೋಗುವ ಸಂದರ್ಭದಲ್ಲಿ ಕೇಸರಿ ಪೇಟಾ, ಬೆಲ್ಟ್ ಹಾಗೂ ವಾಚ್ಗಳನ್ನು ತೆಗೆದು ಹೋಗಲು ಅಧಿಕಾರಿಗಳು ಹೇಳುತ್ತಾರೆ. ಅದೇ ರೀತಿ ಅನ್ಯ ಕೋಮಿನವರಿಗೆ ಇದೇ ರೀತಿ ಹೇಳುತ್ತಾರಾ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಾಲಿಕೆ ಎಐಸಿಸಿ ಅಧ್ಯಕ್ಷರ ಕುಟುಂಬದ ಕಚೇರಿ:

‘ಮಹಾನಗರ ಪಾಲಿಕೆಯ ಕಚೇರಿ ಎಐಸಿಸಿ ಅಧ್ಯಕ್ಷರ ಕುಟುಂಬದ ಕಚೇರಿಯಾಗಿದೆ. ಅಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಸಚಿವ ಪ್ರಿಯಾಂಕ್ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವಚಿತ್ರ ಹಾಕಲಾಗಿದೆ. ಇವರು ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನ ಮಂತ್ರಿಗಳಾ? ಯಾವ ಶಿಷ್ಠಾಚಾರದಲ್ಲಿ ಇವರ ಚಿತ್ರಗಳನ್ನು ಹಾಕಲು ನಿಯಮವಿದೆ’ ಎಂದು ಪ್ರಶ್ನೆ ಮಾಡಿದರು.

‘ಜಿಲ್ಲೆಯಲ್ಲಿ ನ್ಯಾಯಾಲಯದ ಆದೇಶಕ್ಕೂ ಬೆಲೆ ಇಲ್ಲ. ಶಿಷ್ಠಾಚಾರಕ್ಕೂ ಬೆಲೆ ಇಲ್ಲ. ಉಸ್ತುವಾರಿ ಸಚಿವರ ಆದೇಶ ಪಾಲಿಸಲು ಮಾತ್ರ ಪೊಲೀಸರು ಇದ್ದಾರೆ. ‘ಜಿರೋ ಟ್ರಾಫಿಕ್ ಮಿನಿಸ್ಟರ್’ ಅವರು ಈಚೆಗೆ ಕರಾವಳಿಯಲ್ಲಿ ಕೋಮುದಳ್ಳುರಿಯಂದ ಐಟಿ ಕಂಪನಿಗಳು ಹೂಡಿಕೆ ಮಾಡಲು ಹಿಂಜರಿಯುತ್ತಿವೆ ಎಂದು ಹೇಳಿದ್ದಾರೆ. 2012ರಲ್ಲಿಯೇ ಕಲಬುರಗಿ ಹೈಕೋರ್ಟ್ ಸಮೀಪದಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಈವರೆಗೆ ಜಿಲ್ಲೆಗೆ ಎಷ್ಟು ಹೂಡಿಕೆ ಮಾಡಿಸಿದ್ದೀರಿ ಎಂಬುದು ಲೆಕ್ಕ ನೀಡಬೇಕು. ಐಟಿ ಪಾರ್ಕ್ ಲಿಫ್ಟ್ ಹಾಗೂ ಶೌಚಾಲಯವೂ ನಿರ್ಮಾಣ ಮಾಡದ ಸ್ಥಿತಿಯಲ್ಲಿ ಸರ್ಕಾರವಿದೆ’ ಎಂದು ಆಪಾದಿಸಿದರು.

ಶಿವಸೇನಾ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ಯುವ ಘಟಕದ ಜಿಲ್ಲಾಧ್ಯಕ್ಷ ರಾಕೇಶ ಜಮಾದಾರ್, ಮಲ್ಕಣ್ಣ ಹಿರೇಪೂಜಾರಿ, ಪ್ರದೀಪ ಹೇರೂರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.