ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಗಳ ಪ್ರತಿಕೃತಿಗಳ ಮೆರವಣಿಗೆ

Last Updated 11 ನವೆಂಬರ್ 2019, 9:37 IST
ಅಕ್ಷರ ಗಾತ್ರ

ಕಮಲಾಪುರ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಸಂಭ್ರಮದಿಂದ ಈದ್‌ ಮಿಲಾದ್‌ ಆಚರಿಸಿದರು.

ಮಹಮ್ಮದ್‌ ಪೈಗಂಬರರ ನಾಮಸ್ಮರಣೆಯೊಂದಿಗೆ ಸಾವಿರಾರು ಮುಸ್ಲಿಂ ಬಾಂಧವರು ಪಟ್ಟಣದ ಮದೀನಾ ಮಸೀದಿಯಿಂದ ಮೆರವಣಿಗೆ ಹೊರಟರು. ಶಂಕರಲಿಂಗೇಶ್ವರ ಗುಡಿ, ಬಸವೇಶ್ವರ ವೃತ್ತ, ಬಸ್‌ ನಿಲ್ದಾಣ ಪ್ರದೇಶ, ಮೂರ ಅಂಗಡಿ, ಲಕ್ಷ್ಮೀಗುಡಿ ಪ್ರದೇಶ ಸೇರಿದಂತೆ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಪಟ್ಟಣದ ಮೆಕ್ಕಾ ಮಸೀದಿ, ಮದೀನಾ ಮಸೀದಿ, ಬಾಬರಿ ಮಸೀದಿ, ಜಾಮಿಯಾ ಮಸೀದಿ, ಶಹರಬೇಸ್‌ನ ಮೆಕ್ಕಾ ಮಸೀದಿ, ಬೆಳಕೋಟಾದ ನುರಾನಿ ಮಸೀದಿಗಳ ಸದಸ್ಯರು ಮಸೀದಿಗಳ ಪೃತಿಕೃತಿಗಳೊಂದಿಗೆ ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್‌ ಸತ್ತಾರ, ಮಾಜಿ ಅಧ್ಯಕ್ಷ ಜಾಕೀರ ಹುಸೇನ, ಸದಸ್ಯ ಮಖದುಮ್‌ ಖಾಜಿ, ಮುಖಂಡರಾದ ಇಬ್ರಾಹಿಂ ಸಾಬ್‌ ಅತ್ತಾರ, ಸೈಯ್ಯದ್‌ ಬಾಬಾ, ರಶೀದ್‌ ನಂದೂರ ಧಾಬಾ, ಅಬ್ದುಲ್‌ ಲತೀಫ್‌ ದಳಪತಿ, ಶಕೀಲ್‌ ಬೇಗ್‌, ಸಯ್ಯದ್‌ ಮಖಬುಲ್‌, ಮೈನೋದ್ದಿನ ಗುಳ್ಳಿ, ಮಹಮ್ಮದ್‌ ಜಲೀಲ್‌, ತಯ್ಯಬ್‌ ಚೌದ್ರಿ, ಸಾದಿಕ್‌ ಗುಳ್ಳಿ, ಸದ್ದಾಮ್‌ ಚೌದ್ರಿ, ಮಸ್ತಾನ್‌ ಗುಳ್ಳಿ, ಮುಕ್ರಮ್‌ ಜಾನಿ, ಶಕೀಲ್‌ ಸೌದಾಗರ್‌, ಹಸನಮಿಯಾ ಬೆಳಕೋಟಾ, ಮಸುದ್‌ ಮಡಕಿ, ಮೆಹಬೂಬ್‌ ಮಡಕಿ, ತಾಹೇರ್‌ ಪಾಶಾ, ನಬಿ ನಂದೂರ್, ಮಾರೂಫ್‌, ಮೆಹಬೂಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT