ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ಮಾರಾಟ ಬಂದ್‌, 450 ಕುಟುಂಬ ಅತಂತ್ರ

Last Updated 31 ಮಾರ್ಚ್ 2020, 15:40 IST
ಅಕ್ಷರ ಗಾತ್ರ

ಕಲಬುರ್ಗಿ: ಭಾರತ ಲಾಕ್‌ಡೌನ್‌ ಆದೇಶ ಜಾರಿ ಆದಾಗಿಂದಲೂ ನಗರದಲ್ಲಿ ‘ಬಡಾ’ ಹಾಗೂ ‘ಚೋಟಾ’ ಮಾಂಸ ಮಾರಾಟದ ಮಳಿಗೆಗಳು ಸಂಪೂರ್ಣ ಬಂದ್‌ ಆಗಿವೆ. ಆದರೆ, ಇದೇ ಉದ್ಯೋಗ ನಂಬಿಕೊಂಡ ಕೆಲವರು ತಮ್ಮ ಮನೆಗಳಲ್ಲೇ ಮಾಂಸ ಕತ್ತರಿಸಿ ಮನೆಮನೆಗೆ ಹೋಗಿ ಮಾರುತ್ತ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ.

ನಗರದ ರೋಜಾ ಬಡಾವಣೆ, ಆಸೀಫ್‌ ಗಂಜ್‌ನ ಚಪ್ಪಲ್‌ ಬಜಾರ್‌, ಕಪಡಾ ಬಜಾರ್‌, ಸರಾಫ್‌ ಬಜಾರ್‌ಗಳ ಆಸುಪಾಸಿನಲ್ಲಿ ಮಾಂಸದ ಮಾರುಕಟ್ಟೆ ಇದೆ. ಇದರಲ್ಲಿ 65 ಕುರಿ ಹಾಗೂ ಕೋಳಿ ಮಾಂಸ, 100ಕ್ಕೂ ಹೆಚ್ಚು ದನದ ಮಾಂಸದ ವ್ಯಾಪಾರ ನಡೆಯುತ್ತಿತ್ತು. ಸುಮಾರು 450ಕ್ಕೂ ಹೆಚ್ಚು ಕುಟುಂಗಳು ಇದನ್ನೇ ನಂಬಿಕೊಂಡಿವೆ.

ಮಾರ್ಚ್‌ 15ರಿಂದಲೇ ಎಲ್ಲ ಮಾಂಸದ ಅಂಗಡಿಗಳು ಹಾಗೂ ಮಾಂಸಾಹಾರಿ ಹೋಟೆಲ್‌ಗಳನ್ನು ಬಂದ್‌ ಮಾಡಲಾಗಿದೆ. ಮುಂಚಿತವಾಗಿಯೇ ಕುರಿ, ಕೋಳಿ ಖರೀದಿಸಿದ್ದ ಕೆಲವರು ವ್ಯಾಪಾರಿಗಳು ಮಾತ್ರ ‘ಚಿಕ್ಕ ಮಾಂಸ’ವನ್ನು ಕೊಯ್ದು, ಮನೆಗಳಿಗೆ ಹೋಗಿ ಮಾರುತ್ತಿದ್ದಾರೆ. ‘ದೊಡ್ಡ’ ದನದ ಮಾಂಸ ಮಾರಾಟ ಮಾತ್ರ ಸಂಪೂರ್ಣ ನಿಂತಿದೆ. ಇದರಿಂದ ಸಹಜವಾಗಿಯೇ ಕೋಳಿ ಹಾಗೂ ಕುರಿ ಮಾಂಸಕ್ಕೆ ಹೆಚ್ಚು ದರ ಆಕರಿಸುತ್ತಿದ್ದಾರೆ ಎಂದು ಮಾಂಸಾಹಾರ ಪ್ರಿಯರು ಮಾಹಿತಿ ನೀಡಿದ್ದಾರೆ.‌

‘ಇಲ್ಲಿಗೆ 16 ದಿನಗಳಾಗಿವೆ; ನಾವು ಸಂಪೂರ್ಣ ಸಸ್ಯಾಹಾರವನ್ನೇ ಪಡೆಯುತ್ತಿದ್ದೇವೆ. ಮಾಂಸಾಹಾರ ನಮ್ಮ ಎಂದಿನ ಊಟ. ಆದರೆ, ಈಗ ಒಂದು ಮೊಟ್ಟೆಯೂ ಸಿಗದಂತೆ ಬಂದ್‌ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆಗಳಲ್ಲಿಯೂ ಕೋವಿಡ್‌–19 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಆದರೆ, ಅಲ್ಲಿ ಎಲ್ಲಿಯೂ ಮಾಂಸದ ವ್ಯಾಪಾರ ಬಂದ್‌ ಮಾಡಿಲ್ಲ. ಚಿಕ್ಕಮಗಳೂರು, ಮೈಸೂರಿನಲ್ಲಿ ಹಕ್ಕಿಜ್ವರ ಕಂಡುಬಂದಿದೆ. ಆದರೂ ಅಲ್ಲಿ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಕಲಬುರ್ಗಿಯಲ್ಲಿ ಹಕ್ಕಿಜ್ವರದ ಲಕ್ಷಣಗಳು ದಾಖಲಾಗಿಯೇ ಇಲ್ಲ ಆದರೂ ಏಕೆ ಬಂದ್‌ ಮಾಡಿದ್ದಾರೆ ಎಂಬುದು ತಿಳಿಯದಾಗಿದೆ. ಸಾಮಾಜಿಕ ಸುರಕ್ಷತಾ ಅಂತರ ಕಾಯ್ದುಕೊಂಡು ಮಾಂಸ ಮಾರಲು ಅನುಮತಿ ನೀಡಬೇಕು’ ಎಂಬುದು ವ್ಯಾಪಾರಿ ರಫೀಕ್‌ ಅವರ ಮನವಿ.

‘ಬಹುಪಾಲು ಖುರೇಷಿ (ಕಸಾಬ್‌) ಸಮುದಾಯದವರು ಈ ಮಾಂಸದ ವ್ಯಾಪಾರವನ್ನೇ ಅವಲಂಬಿಸಿದ್ದಾರೆ. ಕೋಳಿ, ಕುರಿಯಂಥ ಸಣ್ಣ ಮಾಂಸ ಮಾರುವವರು ಚೋಟಾ ಖುರೇಷಿ ಹಾಗೂ ದಸದ ಮಾಂಸ ವ್ಯಾಪಾರಿಗಳನ್ನು ಬಡಾ ಖುರೇಷಿ ಸಮುದಾಯಕ್ಕೆ ಸೇರಿದ್ದಾರೆ. ನಗರದಲ್ಲಿ ಸಾವಿರಾರು ಕಟುಂಬಗಳು ಈ ಸಮುದಾಯಕ್ಕೆ ಸೇರಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವರು ನಿರುದ್ಯೋಗಿ ಆಗಿದ್ದಾರೆ’ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT