ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇರಿ ಮಾಠಿ ಮೇರಾ ದೇಶ: ಕಲಬುರಗಿ ಯುವಕನಿಗೆ ಆಹ್ವಾನ

Published 8 ಆಗಸ್ಟ್ 2024, 13:13 IST
Last Updated 8 ಆಗಸ್ಟ್ 2024, 13:13 IST
ಅಕ್ಷರ ಗಾತ್ರ

ಕಲಬುರಗಿ: ‘ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿರುವ ‘ಮೇರಿ ಮಾಠಿ ಮೇರಾ ದೇಶ’ ಮತ್ತು ಪೊಲೀಸ್ ವೃತ್ತಿ ತರಬೇತಿ ಕಾರ್ಯಕ್ರಮಕ್ಕೆ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಆಕಾಶ್ ಪಾಟೀಲ ಆಯ್ಕೆಯಾಗಿದ್ದಾರೆ’ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ದಶರಥ ಮೇತ್ರೆ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇರಿ ಮಾಠಿ ಮೇರಾ ದೇಶ ಕಾರ್ಯಕ್ರಮ ಪ್ರಯುಕ್ತ ದೇಶದ ಎಲ್ಲ ಮಹಾವಿದ್ಯಾಲಯಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿ ಆಕಾಶ್ ತನ್ನ ಎನ್.ಎಸ್.ಎಸ್ ಕಾರ್ಯಗಳಿಂದ ಪ್ರಧಾನ ಮಂತ್ರಿಗಳಿಂದ ಆಹ್ವಾನ ಪಡೆದಿದ್ದಾನೆ. ದೇಶದ 77ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾನೆ’ ಎಂದು ಹೇಳಿದರು.

ಎನ್.ಎಸ್.ಎಸ್ ಅಧಿಕಾರಿ ಪ್ರೊ. ದಯಾನಂದ ಹೂಡೆಲ್ ಮಾತನಾಡಿ, ‘ಒಡಿಶಾ ಹಾಗೂ ಎರಡು ವಿಶೇಷ ಎನ್‌.ಎಸ್‌.ಎಸ್‌ ಕ್ಯಾಂಪ್‌ನಲ್ಲಿ  ಭಾಗವಹಿಸಿ, ಸುಮಾರು 40ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾನೆ. ರಾಜ್ಯದ 24 ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಕಲಬುರಗಿಯಿಂದ ಆಕಾಶ ಒಬ್ಬನೇ ದೆಹಲಿಗೆ ತೆರಳಲಿದ್ದಾನೆ’ ಎಂದು ಹೇಳಿದರು.

ಈ ವೇಳೆ ಪ್ರೊ. ಜಗನ್ನಾಥ ದಶಟ್ಟಿ, ವಿದ್ಯಾರ್ಥಿ ಆಕಾಶ್ ಹಾಜರಿದ್ದರು.

Quote - ಪಿಯುಸಿಯಿಂದ ಎನ್‌ಎಸ್‌ಎಸ್ ಮೂಲಕ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಧಾನ ಮಂತ್ರಿ ಅವರಿಂದ ಅಹ್ವಾನ ಪತ್ರ ಬಂದಿದ್ದು ಸಂತಸ ತಂದಿದೆ ಆಕಾಶ್ ಪಾಟೀಲ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT