ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯ ಇಎಸ್ಐಸಿ ಆವರಣದಲ್ಲೇ ಬೋಯಿಂಗ್‌ನ 250 ಬೆಡ್ ಆಸ್ಪತ್ರೆ: ನಿರಾಣಿ

Last Updated 18 ಮೇ 2021, 5:23 IST
ಅಕ್ಷರ ಗಾತ್ರ

ಕಲಬುರ್ಗಿ: ಬೋಯಿಂಗ್ ‌ಇಂಡಿಯಾ ಸಂಸ್ಥೆಯಿಂದ ನೀಡಲಾಗುವ 250 ಬೆಡ್ ಸಾಮರ್ಥ್ಯದ ಆಸ್ಪತ್ರೆಯನ್ನು ನಗರದ ಇಎಸ್ಐಸಿ ಆಸ್ಪತ್ರೆ ‌ಹಾಗೂ ಮೆಡಿಕಲ್ ಕಾಲೇಜಿನ ಅವರಣದಲ್ಲೇ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ‌ಜಾಗ ಗುರುತಿಸಿ ಕಟ್ಟಡ ‌ನಿರ್ಮಿಸಲು ವಿಳಂಬವಾಗುತ್ತದೆ. ಆದ್ದರಿಂದ ಈಗಾಗಲೇ ಇರುವ ಇಎಸ್ಐಸಿಯಲ್ಲಿ ಆಸ್ಪತ್ರೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.

ಆಮ್ಲಜನಕ ಕೊರತೆ ಇಲ್ಲ: ಜಿಲ್ಲೆಗೆ ಪೂರೈಕೆಯಾಗುವ ಆಮ್ಲಜನಕ ಸಾಮರ್ಥ್ಯವನ್ನು 35 ಕೆ.ಎಲ್.ಗೆ ಹೆಚ್ಚಿಸಿದ್ದರಿಂದ ಆಮ್ಲಜನಕದ ಕೊರತೆ ಉಂಟಾಗಿಲ್ಲ. ಇಲ್ಲಿಗೆ ಬಳ್ಳಾರಿಯಿಂದ ಬಂದ ಆಮ್ಲಜನಕ ಟ್ಯಾಂಕರ್ ನಮ್ಮ ಘಟಕಗಳನ್ನು ‌ಭರ್ತಿ ಮಾಡಿ ಉಳಿದ ಆಮ್ಲಜನಕವನ್ನು ಬೆಳಗಾವಿಗೆ ಕಳಿಸಿಕೊಡಲಾಗಿದೆ ಎಂದರು.

1700 ರೆಮ್‌ಡಿಸಿವಿರ್‌ ಇಂಜೆಕ್ಷನ್: ಜಿಲ್ಲೆಗೆ ಮಂಗಳವಾರ 1700 ರೆಮ್‌ಡಿಸಿವಿರ್‌ ಇಂಜೆಕ್ಷನ್ ಗಳು ಬರಲಿವೆ. ಜಿಲ್ಲಾಡಳಿತದ ಬಳಿ 200 ಇಂಜೆಕ್ಷನ್ ಸಂಗ್ರಹಗಳಿವೆ. ಒಟ್ಟು 1900 ಇಂಜೆಕ್ಷನ್ ಲಭ್ಯವಿವೆ. ಕಾಳಸಂತೆಗೆ ತಡೆ ಹಾಕಿದ್ದರಿಂದ ಇಂಜೆಕ್ಷನ್ ದುರ್ಬಳಕೆ ತಪ್ಪಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್‌ನಿಂದ ಬಳಲುತ್ತಿರುವವರಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ಪ್ರತ್ಯೇಕ ‌ಕೊಠಡಿಯ ಸಮಸ್ಯೆ ಇದೆ. ಹಾಗಾಗಿ ಸರ್ಕಾರಿ ಶಾಲೆ, ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಅವರನ್ನು ಕೇಂದ್ರಕ್ಕೆ ಕರೆತರಲು ಮನವೊಲಿಸಲಾಗುತ್ತಿದೆ ಎಂದರು.

ಪರಿಸ್ಥಿತಿ ಸುಧಾರಣೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ‌ಕಡಿಮೆಯಾಗುತ್ತಿದ್ದು, ರಾಜ್ಯದಲ್ಲಿ ಮೊದಲು ಕಲಬುರ್ಗಿ ‌ಮೂರನೇ ಸ್ಥಾನದಲ್ಲಿತ್ತು. ಈಗ 19ನೇ ಸ್ಥಾನಕ್ಕೆ ಇಳಿದಿದೆ. ಒಂದು ವಾರದಲ್ಲಿ 24ನೇ ಸ್ಥಾನಕ್ಕೆ ಇಳಿಯಲಿದೆ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ಬೀದರ್ ಸಂಸದ ಭಗವಂತ ಖೂಬಾ, ಎನ್ ಇಕೆಆರ್ ಟಿಸಿ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಬಸವ ಕಲ್ಯಾಣ ಶಾಸಕ ಶರಣು ಸಲಗರ, ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಬಿಜೆಪಿ ‌ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT