ಕಲಬುರಗಿ: ‘ಜಿಲ್ಲೆಯ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ನವೀನ ತಂತ್ರಜ್ಞಾನ ಬಳಸಿ ಕೃಷಿಕರ ಆದಾಯ ದ್ವಿಗುಣಗೊಳಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಲ್ಲಿಸುವಂತೆ ಕೃಷಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ವಿಕಾಸ ಸೌಧದಲ್ಲಿ ಈಚೆಗೆ ನಡೆಸಿದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜನ ಹಾಗೂ ರೈತ ಉಪಯೋಗಿ ಯೋಜನೆಗಳ ಜಾರಿಗೆ ಕೆಕೆಆರ್ಡಿಬಿ ಅನುದಾನ ಒದಗಿಸಲಾಗುವುದು. ಕೃಷಿಯಲ್ಲಿ ನವೀನ ಕಲ್ಪನೆಗಳ ಅವಶ್ಯವಿದ್ದು, ಒಬ್ಬ ತಜ್ಞರನ್ನು ಸಮಾಲೋಚಕರನ್ನಾಗಿ ನೇಮಿಸಿಕೊಳ್ಳಬೇಕು’ ಎಂದರು.

ಜಿಲ್ಲೆಯಲ್ಲಿ ಜೋಳದ ಬಿತ್ತನೆ ಕಡಿಮೆಯಾಗುತ್ತಿರುವ ಬಗ್ಗೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕಲಬುರಗಿ ರೊಟ್ಟಿಗೆ ಬ್ರ್ಯಾಂಡ್ ನೀಡಿದ್ದು, ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಬೇಕು. ಕಡುಬು, ಮುಟಿಗೆ, ಅಳ್ಳಿಗೆ ಮಾರುಕಟ್ಟೆ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಕೃಷಿ ಇಲಾಖೆಗೆ ಕೆಕೆಆರ್ಡಿಬಿ ₹ 27 ಕೋಟಿ ಅನುದಾನ ನೀಡಿದ್ದು, ಕ್ರಿಯಾ ಯೋಜನೆಯಂತೆ ಕಾರ್ಯಕ್ರಮಗಳ ಅನುಷ್ಠಾನ ಮಾಡಬೇಕು. ಚಿತ್ತಾಪುರದಲ್ಲಿ ಪ್ರಾಯೋಗಿಕವಾಗಿ ಕಬ್ಬು ಬಿತ್ತನೆ ಮತ್ತು ಮೆಕ್ಕಜೋಳದಿಂದ ಜೈವಿಕ ಇಂಧನ ಉತ್ಪಾದಿಸಲು ಮೆಕ್ಕೆ ಜೋಳ ಬಿತ್ತನೆಗೆ ಕ್ಷೇತ್ರ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

ಕಲಬುರಗಿ ಎಪಿಎಂಸಿ ಕವರ್ಡ್ ಪ್ಲಾಟ್ ಫಾರಂ ಮೇಲೆ ₹ 3 ಕೋಟಿ ಮೊತ್ತದಲ್ಲಿ ಸೋಲಾರ್ ಮೈಕ್ರೋ ಗ್ರಿಡ್ , ಜೇವರ್ಗಿ, ಚಿತ್ತಾಪುರ, ಆಳಂದ, ಸೇಡಂ ಎಪಿಎಂಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಿಪಿಆರ್ ತಯಾರಿಸುವಂತೆ ನಿರ್ದೇಶನ ನೀಡಿದರು.

‘ರೇಷ್ಮೆ ಗೂಡು ಬಳಿಕ ಚಟುವಟಿಕೆಗೆ ಎರಡು ಸ್ವಯಂ ನೂಲು ಬಿಚ್ಚಣಿಕೆ ಘಟಕಗಳು ಮಂಜೂರಾಗಿವೆ. ಎಂಇಆರ್ಎಂ ಯಂತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆ ಅಂತಿಮವಾಗಿದೆ. ಜಾಫರಾಬಾದ್ ಬಳಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಸಚಿವರ ಆಪ್ತ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ, ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಾಲರೆಡ್ಡಿ, ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿರ್ದೇಶಕ ನಜಿಬುಲ್ಲಾ ಖಾನ್, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಪರ್ವೇಜ್ ಬಂಥನಾಳ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಧನರಾಜ, ಹೇಮಾ, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಅಣ್ಣಾಜಿರಾವ್, ರೇಷ್ಮೆ ಯೋಜನಾ ಉಪನಿರ್ದೇಶಕಿ ವಿಜಯಲಕ್ಷ್ಮಿ, ಕೃಷಿ ಉಪನಿರ್ದೇಶಕರಾದ ಅನಸೂಯಾ, ಸೋಮಶೇಖರ ಬಿರಾದಾರ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಮದಾರ, ರೇಷ್ಮೆ ಉಪನಿರ್ದೇಶಕ ಪ್ರಕಾಶ ಬಾಬು, ಎಪಿಎಂಸಿ ಸಹಾಯಕ ನಿರ್ದೇಶಕಿ ಸವಿತಾ ನಾಯ್ಕ್ ಹಾಜರಿದ್ದರು.

ಡಿಪಿಆರ್ ಸಲ್ಲಿಸಲು ಸೂಚನೆ

ಜೇವರ್ಗಿಯಲ್ಲಿ 3 ಸಾವಿರ ಮೆಟ್ರಿಕ್ ಟನ್ ಮೆಣಸಿನಕಾಯಿ ಶೇಖರಣೆ ಚಿತ್ತಾಪುರ ಅಥವಾ ಅಫಜಲಪುರದಲ್ಲಿ ತರಕಾರಿ ಒಣದ್ರಾಕ್ಷಿ ಹಾಗೂ ಹಣ್ಣುಗಳ ಶೇಖರಣೆಯ 3000 ಮೆಟ್ರಿಕ್ ಟನ್ ಶೀಥಲ ಘಟಕ ತಂತ್ರಜ್ಞಾನ ಅಧಾರಿತ ತೋಟಗಾರಿಕೆ ಕಚೇರಿಯ ತರಬೇತಿ ಕೇಂದ್ರ ಚಿತ್ತಾಪುರ ತಾಲ್ಲೂಕಿನ ಕೊಂಚೂರು ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಎಕ್ಸ್ಲೆನ್ಸ್ ಕೇಂದ್ರ ಸ್ಥಾಪನೆಗೆ ಡಿಪಿಆರ್ ಸಲ್ಲಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ. ನಗರದ ಐದು ಕಡೆ ತಾಲ್ಲೂಕು ಕೇಂದ್ರಗಳ ಒಂದೆರಡು ಕಡೆ ಕಿಯೋಸ್ಕ್ ಮಾದರಿಯಲ್ಲಿ ಹಣ್ಣು/ ತರಕಾರಿ ಮಳಿಗೆ ಸ್ಥಾಪಿಸಲು ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.