ಅಧಿಕಾರ ಸ್ವೀಕಾರಕ್ಕೆ ‘ರಾಹು’ಕಾಟ’; ಗೌಡರ ‘ದರ್ಬಾರ್‌’!

7

ಅಧಿಕಾರ ಸ್ವೀಕಾರಕ್ಕೆ ‘ರಾಹು’ಕಾಟ’; ಗೌಡರ ‘ದರ್ಬಾರ್‌’!

Published:
Updated:
Deccan Herald

ಕಲಬುರ್ಗಿ: ರಾಹುಕಾಲದ ‘ಕಾಟ’ಕ್ಕೆ ಹಾಗೂ ಹುಮನಾಬಾದ್‌ ಗೌಡರ ‘ದರ್ಬಾರ್‌’ಗೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸ್ಥಳೀಯ ಕಚೇರಿ ಸಾಕ್ಷಿಯಾಯಿತು.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಗಣಿ ಮತ್ತು ಭೂವಿಜ್ಞಾನ, ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ ಹುಮನಾಬಾದ್‌ ಅವರು ಮಂಡಳಿಯ ಅಧ್ಯಕ್ಷರಾಗಿ ಈ ಹಿಂದೆಯೇ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಅದನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.

‘ಗುರುವಾರ ಬೆಳಿಗ್ಗೆ 10.45ಕ್ಕೆ ಸಚಿವ ರಾಜಶೇಖರ ಪಾಟೀಲ ನಗರಕ್ಕೆ ಬರುತ್ತಾರೆ. 11 ಗಂಟೆಗೆ ಅಧಿಕಾರ ಸ್ವೀಕರಿಸುತ್ತಾರೆ’ ಎಂದು ಮಾಧ್ಯಮಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಚಿವರು ಮಂಡಳಿಯ ಕಚೇರಿಗೆ ಬಂದಿದ್ದು 12.20ರ ನಂತರ.

‘ಮಧ್ಯಾಹ್ನ 12 ಗಂಟೆಯವರೆಗೆ ರಾಹುಕಾಲ ಇತ್ತು. ಅದು ಕಳೆದ ನಂತರವೇ ಸಚಿವರು ಇಲ್ಲಿಗೆ ಬಂದು ಅಧಿಕಾರ ಸ್ವೀಕರಿಸಿದರು’ಎಂದು ಅಲ್ಲಿದ್ದವರು ಹೇಳಿದರು!

ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಸಚಿವರ ಬೆಂಬಲಿಗರು, ಬೀದರ್‌ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹೀಗಾಗಿ ಮಂಡಳಿಯ ಕಚೇರಿ ಕಿಕ್ಕಿರಿದು ತುಂಬಿತ್ತು. ಅಧ್ಯಕ್ಷರ ಕೊಠಡಿ, ಕಾರಿಡಾರ್‌, ಸಭಾಂಗಣ ಹೀಗೆ ಎಲ್ಲೆಲ್ಲೂ ಸಚಿವರ ಬೆಂಬಲಿಗರು–ಬೀದರ್‌ ಜಿಲ್ಲೆಯ ಮುಖಂಡರು ಇದ್ದರು. 

‘ಹುಮನಾಬಾದ್‌ ಗೌಡರ ದರ್ಬಾರ್‌ ಎಂದರೆ ಹೀಗೆಯೇ. ತಮ್ಮೊಂದಿಗೆ ಬೀದರ್‌ ಜಿಲ್ಲೆಯಿಂದ  ಬಂದವರಿಗೆಲ್ಲರಿಗೂ ಸಚಿವರು ಖಾಸಗಿಯಾಗಿ ಇಲ್ಲಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ’ ಎಂದು ಅವರ ಬೆಂಬಲಿಗರೊಬ್ಬರು ಹೆಮ್ಮೆಯಿಂದ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !