ಶಾಸಕ ಉಮೇಶ ಜಾಧವ ನಿಲುವು ಬದಲು?

7

ಶಾಸಕ ಉಮೇಶ ಜಾಧವ ನಿಲುವು ಬದಲು?

Published:
Updated:
Prajavani

ಕಲಬುರ್ಗಿ: ಬಿಜೆಪಿಯವರ ಜೊತೆ ಮುಂಬೈನ ಹೋಟೆಲ್‌ವೊಂರದಲ್ಲಿ ಇರುವ  ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಡಾ.ಉಮೇಶ ಜಾಧವ ನಿಲುವು ಬದಲಿಸಿದ್ದು, ಕಾಂಗ್ರೆಸ್‌ ಪಕ್ಷದಲ್ಲಿಯೇ ಮುಂದುವರೆಯಲಿದ್ದಾರೆ ಎಂದು ಅವರ ಆಪ್ತಮೂಲ ತಿಳಿಸಿದೆ.

‘ಉಮೇಶ ಜಾಧವ ಅವರು ಕಾಂಗ್ರೆಸ್‌ ತ್ಯಜಿಸುವ ಕುರಿತು ಎಲ್ಲಿಯೂ ಮಾತನಾಡಿಲ್ಲ. ಸಂಸದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧವೂ ಮಾತನಾಡಿಲ್ಲ. ಎರಡು ದಿನಗಳಲ್ಲಿ ಅವರು ಕ್ಷೇತ್ರಕ್ಕೆ ಬರುವ ಸಾಧ್ಯತೆ ಇದೆ. ನಂತರ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ್‌ ಹೇಳಿದರು.

ಬಿಜೆಪಿಯ ಆಪರೇಷನ್‌ ಕಮಲ ಬಹುತೇಕ ವಿಫಲವಾಗಿರುವುದು ಉಮೇಶ ಅವರ ನಿಲುವು ಬದಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಪ್ರತಿಭಟನೆ: ಏತನ್ಮಧ್ಯೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಡಾ.ಉಮೇಶ ಜಾಧವ ಅವರ ಕಲಬುರ್ಗಿಯ ನಿವಾಸದ ಎದುರು ಕುದುರೆ ಸಮೇತ ಪ್ರತಿಭಟನೆ ನಡೆಸಿದರು.

‘ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಹಾಗೂ ಉಮೇಶ ಜಾಧವ ಅವರು ₹50 ಕೋಟಿಗೆ ಮಾರಾಟವಾಗಿದ್ದಾರೆ’ ಎಂದು ಆರೋಪಿಸಿ ಘೋಷಣೆ ಕೂಗಿದರು.

‘ಚಿಂಚೋಳಿ ಮತದಾರರನ್ನು ₹50 ಕೋಟಿಗೆ ಮಾರಾಟ ಮಾಡಿದ್ದಾರೆ’ ಎಂದು ಡಾ.ಉಮೇಶ ಜಾಧವ ಅವರ ಭಾವಚಿತ್ರದ ಮೇಲೆ ಬರೆದಿರುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಾಧವ ಅವರ ಚಿಂಚೋಳಿ ಹಾಗೂ ಕಲಬುರ್ಗಿ ನಿವಾಸಗಳಿಗೆ ಭದ್ರತೆ ಒದಗಿಸಲಾಗಿದೆ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !