ಚಿಂಚೋಳಿ: ಪ್ರಸಕ್ತ ವರ್ಷವೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಬೈಸಿಕಲ್ ಹಾಗೂ ಶೂ ಸಾಕ್ಸ್ ಭಾಗ್ಯವಿಲ್ಲ. ಪ್ರಸಕ್ತ ವರ್ಷ ಆರ್ಥಿಕ ಇಲಾಖೆಯವರು ಒಪ್ಪಿದರೆ ಮುಂದಿನ ವರ್ಷ ಮಕ್ಕಳಿಗೆ ಬೈಸಿಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಶಾಸಕ ಅವಿನಾಶ ಉಮೇಶ ಜಾಧವ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನಿಡಿದ ಸಚಿವರು, 8ನೇ ತರಗತಿ ಮಕ್ಕಳೀಗೆ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಬೈಸಿಕಲ್ ಹಾಗೂ ಶೂ ಮತ್ತು ಸಾಕ್ಸ್ ನೀಡದಿರುವುದು ಗಮನಕ್ಕೆ ಬಂದಿದೆ. ವಿದ್ಯಾವಿಕಾಸ ಯೋಜನೆ ನೀಡಲಾಗುವ ಶೂ ಮತ್ತು ಸಾಕ್ಸ್ ವಿತರಣೆಗೆ2022-23ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಿದರೆ ಮಕ್ಕಳಿಗೆ ಇವುಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದುಸಚಿವರು ಸದನದಲ್ಲಿ ವಿವರಿಸಿದ್ದಾರೆ.

‘ಪೂರ್ಣಶಕ್ತಿ’ಯಿಂದ ಲಿಂಗ ತಾರತಮ್ಯ ನಿವಾರಣೆ: ತಾಲ್ಲೂಕಿನ ಕುಂಚಾವರಂ ಸುತ್ತಲಿನ ತಾಂಡಾಗಳಲ್ಲಿ ಲಿಂಗ ತಾರತಮ್ಯ ಇರುವುದು ಕಂಡು ಬಂದಿದೆ. ಇಲ್ಲಿ 2015ರಿಂದ 2017ವರೆಗೆ ಪೂರ್ಣಶಕ್ತಿ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಇದರಿಂದ ಇಲ್ಲಿ ಲಿಂಗ ತಾರತಮ್ಯ ನಿವಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗಣಿ ಮತ್ತು ಭೂವಿಜ್ಞಾನ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಶಾಸಕ ಅವಿನಾಶ ಉಮೇಶ ಜಾಧವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 10 ಗ್ರಾ.ಪಂ.ಗಳ 39 ಗ್ರಾಮಗಳಲ್ಲಿ 57 ತಾಂಡಾಗಳಲ್ಲಿ ಪೂರ್ಣಶಕ್ತಿ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಪ್ರಸ್ತುತ ಲಿಂಗ ತಾರಮ್ಯ ಪ್ರಕರಣಗಳು ಕಡಿಮೆಯಾಗಿದ್ದು ಶಾಲೆಗಳಲ್ಲಿ 1760 ಬಾಲಕಿಯರು, 2048 ಬಾಲಕರು ಹಾಗೂ ಅಂಗನವಾಡಿಗಳಲ್ಲಿ 1752 ಹೆಣ್ಣು ಮಕ್ಕಳು, 1074 ಗಂಡು ಮಕ್ಕಳು ದಾಖಲಾಗಿದ್ದಾರೆ ಎಂದು ವಿವರಿಸಿದ್ದಾರೆ.

ಪುರಸಭೆಗಳಿಗೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಾಣ: ಪಟ್ಟಣದ ಪುರಸಭೆ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಪಡೆದುಕೊಳ್ಳುವಂತೆ ಆರ್ಥಿಕ ಇಲಾಖೆ ಸಲಹೆ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದ್ದಾರೆ.

ಪಟ್ಟಣದ ಪುರಸಭೆ ಕಚೇರಿಗೆ ಹಾಗೂ ಕಾಳಗಿ ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಮೇಲಿನಂತೆ ಸಲಹೆ ನೀಡಿದೆ ಎಂದು ಶಾಸಕ ಅವಿನಾಶ ಜಾಧವ ತಿಳಿಸಿದ್ದಾರೆ.

‘ಶೇರಿಭಿಕನಳ್ಳಿ ಸ್ಥಳಾಂತರ ಪ್ರಸ್ತಾವ ಸ್ವೀಕೃತವಾಗಿಲ್ಲ’
ಚಿಂಚೋಳಿ ತಾಲ್ಲೂಕಿನ ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಶೇರಿಭಿಕನಳ್ಳಿ ಸ್ಥಳಾಂತರ ಕುರಿತ ಪ್ರಸ್ತಾವ ಸ್ವೀಕೃತವಾಗಿಲ್ಲ ಎಂದು ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.

ಶಾಸಕ ಅವಿನಾಶ ಜಾಧವ ಅವರು ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನಿಡಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ 2018ರ ಅಕ್ಟೋಬರ್ 29ರಂದು ಪತ್ರ ಬರೆದು ಅಲ್ಲಿರುವ ಆಸ್ತಿಗಳ ಬಗ್ಗೆ ಸರ್ವೆ ಮಾಡಲು ಕೋರಿರುತ್ತಾರೆ. ಆದರೆ ಈವರೆಗೂ ಸರ್ವೆ ಮಾಡಿರುವ ವರದಿ ಲಭ್ಯವಾಗಿಲ್ಲ. ಇದಕ್ಕೆ ಕಾಲಮಿತಿ ನಿಗದಿಪಡಿಸಿಲ್ಲ. ಪ್ರಸ್ತಾವ ಸ್ವೀಕೃತವಾದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.