ಕಲಬುರಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರಲ್ಲ; ಪ್ರಧಾನಿ ನರೇಂದ್ರ ಮೋದಿ ದೇಶದ ಏಕೈಕ ಅಹಿಂದ ನಾಯಕ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರತಿಪಾದಿಸಿದರು.

ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಆರಂಭವಾದ ಬಿಜೆಪಿ ಕಲಬುರಗಿ ಗ್ರಾಮೀಣ ಜಿಲ್ಲಾಮಟ್ಟದ ಪ್ರಶಿಕ್ಷಣ ವರ್ಗದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ–2026 ಉದ್ಘಾಟಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿಗಳು, ಒಳಮೀಸಲಾತಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈತನಕ ಆಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅಂಕಿ–ಅಂಶ ಸಮೇತ ಪಟ್ಟಿ ಮಾಡಿದರು.

‘ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಶಕ್ತಿ ಯೋಜನೆಯಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸಾರಿಗೆ ನೌಕರರಿಗೆ ಸಮರ್ಪಕ ಸಂಬಳ ಕೊಡಲೂ ಸರ್ಕಾರಕ್ಕೆ ದಿಕ್ಕಿಲ್ಲ’ ಎಂದು ಕಾರಜೋಳ ವ್ಯಂಗ್ಯವಾಡಿದರು.

‘ಕಾಂಗ್ರೆಸ್ ಪಕ್ಷ ಸುಮಾರು 65 ವರ್ಷ ದೇಶದ ಆಡಳಿತ ನಡೆಸಿತು. ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಕೂಡಿದ ಆಡಳಿತ ಅದಾಗಿತ್ತು. ಅಂಥವರು ನರೇಂದ್ರ ಮೋದಿ ಆಡಳಿತದತ್ತ ಬೊಟ್ಟು ಮಾಡುತ್ತಿದ್ದಾರೆ. ಆದರೂ, ಪಕ್ಷದ ನಾಯಕರು, ಮುಖಂಡರು, ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ. ಹೀಗಾಗಿಯೇ ಕಾಂಗ್ರೆಸ್ನವರ ಬೂಟಾಟಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ನವರ ಭ್ರಷ್ಟಾಚಾರ 3 ವರ್ಷಗಳಲ್ಲಿ ಮುಗಿಲು ಮುಟ್ಟಿದೆ. ಆದರೂ, ತಮ್ಮದು ನುಡಿದಂತೆ ನಡೆದ ಸರ್ಕಾರದ ಎಂದು ಸಿದ್ದರಾಮಯ್ಯ ಹಾಗೂ ಅವರ ಸಚಿವರು ಭಂಡತನ ಪ್ರದರ್ಶಿಸುತ್ತಾರೆ. ಏನು ನುಡಿದಂತೆ ನಡೆದಿದ್ದಾರೆ? ಅವರ ಪಕ್ಷದ ಪ್ರಣಾಳಿಕೆ ಇಟ್ಟು ಅವರನ್ನು ಚರ್ಚೆಗೆ ಆಹ್ವಾನಿಸಬೇಕು’ ಎಂದರು. ಅಲ್ಲದೇ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತೆ ಕಿವಿಮಾತು ಹೇಳಿದರು.

‘ನಮ್ಮೆಲ್ಲರಿಗೂ ಪಕ್ಷ ತಾಯಿ ಇದ್ದಂತೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಒಟ್ಟಾಗಿ ಬಂದರೆ ಜಿಲ್ಲೆಯ ಎಲ್ಲ 9 ವಿಧಾನಸಭಾ ಕ್ಷೇತ್ರಗಳು ಇಲ್ಲದಿದ್ದರೂ 8 ಕ್ಷೇತ್ರಗಳನ್ನಾದರೂ ಗೆಲ್ಲಲು ಸಾಧ್ಯವಿದೆ. ನೀವೆಲ್ಲ ಒಂದೊಂದು ದಿಕ್ಕಿಗೆ ಒಬ್ಬೊಬ್ಬರು ಹೋದರೆ, ಯಶಸ್ಸು ಸಾಧ್ಯವಾಗದು’ ಎಂದು ಎಚ್ಚರಿಸಿದರು.

‘ನಮ್ಮದು ಸಾಮಾಜಿಕ ನ್ಯಾಯದಡಿ ನಡೆಯುತ್ತಿರುವ ಪಕ್ಷ. ಅದೇ ನಮ್ಮ ಸಿದ್ಧಾಂತ. ಅಂತ್ಯೋದಯ ಹಾಗೂ ಸರ್ವೋದಯ ದೀನದಯಾಳ್ ಉಪಾಧ್ಯಾಯರ ಸಂದೇಶವಾಗಿತ್ತು. ಸಮಾಜದ ಕಟ್ಟಕಡೆಯ ಜನರನ್ನು ಮೇಲೆತ್ತುವುದು, ಅಸ್ಪೃಶ್ಯತೆಯಿಂದ ಬಳಲಿ ಊರ ಹೊರಗಿದ್ದವರನ್ನು ಮುಖ್ಯವಾಹಿನಿಗೆ ತರುವುದೇ ಅಂತ್ಯೋದಯ. ಸಾಮಾಜಿಕ ನ್ಯಾಯದಡಿ ಎಲ್ಲರನ್ನೂ ಒಳಗೊಂಡು ಪಕ್ಷ ಮುನ್ನಡೆಸುವುದೇ ಸರ್ವೋದಯ. ಇವುಗಳ ಮರೆತರೆ ಬಿಜೆಪಿಯ ತತ್ವ ಸಿದ್ಧಾಂತಗಳನ್ನೇ ಮರೆತಂತೆ’ ಎಂದು ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಬಿಜೆಪಿ ಇಂದಿಗೂ ಬಹುಮತದಿಂದ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣವೇನು ಎಂಬುದರ ಆತ್ಮಾವಲೋಕ ಅಗತ್ಯ’ ಎಂದು ಕಾರಜೋಳ ಹೇಳಿದರು.

ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಮುಖಂಡರಾದ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಬಾಬುರಾವ ಚವ್ಹಾಣ, ಸಿದ್ಧಾಜಿ ಪಾಟೀಲ, ನಿತಿನ್ ಗುತ್ತೇದಾರ, ಅರುಣ ಶಹಾಪುರ, ಶರಣಪ್ಪ ತಳವಾರ, ಮಹಾದೇವ ಬೆಳಮಗಿ, ಗೌರಿ ಚಿಚಕೋಟಿ, ಶೋಭಾ, ವೆಂಕಟರೆಡ್ಡಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಪ್ರಶಿಕ್ಷಣ ವರ್ಗ ಮಹಾಭಿಯಾನದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳು, ತಾಲ್ಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 250 ಸಂಘಟನಾತ್ಮಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-34-1007472931

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.