ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ: ಅಫಜಲಪುರಕ್ಕೆ ನಿರಾಣಿ ಭೇಟಿ

Last Updated 13 ಜುಲೈ 2022, 6:56 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ಬುಧವಾರವೂ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ನಾಲ್ಕೈದು ದಿನಗಳಿಂದ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆ ಬುಧವಾರ ಬೆಳಿಗ್ಗೆ ತುಸು ಬಿರುಸುಗೊಂಡಿತು.

ಆಳಂದ ತಾಲ್ಲೂಕಿನ ಖಜೂರಿಯಲ್ಲಿ ಅತ್ಯಧಿಕ 72.3 ಮಿ.ಮೀ ಮಳೆ ಸುರಿದಿದೆ. ಆಳಂದ ಪಟ್ಟಣದಲ್ಲಿ 40.2ಮಿ.ಮೀ, ನಿಂಬರ್ಗಾ 41.0ಮಿ.ಮೀ, ಕೊರಳ್ಳಿ 34.2ಮಿ.ಮೀ, ಎಂ.ಹಿಪ್ಪರಗಾ 42.0ಮಿ.ಮೀ, ಸರ್ಸ್ಂಬ 47 ಮಿ.ಮೀ, ನರೋನಾ 36.0ಮಿ.ಮೀ, ಮತ್ತು ಖಜೂರಿಯಲ್ಲಿ 72.3ಮಿ.ಮೀ ಮಳೆಯಾಗಿದೆ.

ಕಲಬುರಗಿಯ ಐಬಿಯಲ್ಲಿ 49.1 ಮಿ.ಮೀ, ಎಚ್‌ಡಬ್ಲ್ಯು 36.4 ಮಿ.ಮೀ, ಫರ್ಹತಾಬಾದ್ 10.2 ಮಿ.ಮೀ, ಪಟ್ಟಣ 40.9 ಮಿ.ಮೀ, ಅವರದ್(ಬಿ) 22.3 ಮಿ.ಮೀ ಮತ್ತು ಸಾವಳಗಿ(ಬಿ)ಯಲ್ಲಿ 37.1 ಮಿ.ಮೀ ಮಳೆ ಬಿದ್ದಿದೆ.

ಸೇಡಂನಲ್ಲಿ 55.7ಮಿ.ಮೀ, ಅಡಕಿ 42.3ಮಿ.ಮೀ, ಮುಧೋಳ 42.0ಮಿ.ಮೀ, ಕೋಡ್ಲಾ 38.7ಮಿ.ಮೀ ಮತ್ತು ಕೋಲ್ಕುಂದ 45.4ಮಿ.ಮೀ.ನಷ್ಟಿದೆ.

ಚಿಂಚೋಳಿಯಲ್ಲಿ 15.7 ಮಿ.ಮೀ, ಕುಂಚಾವರಂ 50.3 ಮಿ.ಮೀ, ಐನಾಪುರ 45.5 ಮಿ.ಮೀ, ಸುಲೇಪೇಟ :36.2 ಮಿ.ಮೀ, ಚಿಮನಚೋಡ 32.2 ಮಿ.ಮೀ, ಕೋಡ್ಲಿ :39.2 ಮಿ.ಮೀ ಮತ್ತು ನೀಡಗುಂದಾ 32.0 ಮಿ.ಮೀ ಮಳೆಯಾಗಿದೆ.

ನಿರಾಣಿ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ್ ನಿರಾಣಿ ಅವರು ಬುಧವಾರ ಡಿ.ಸಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯ ಬಳಿಕ ಡಾ.ಮುರುಗೇಶ್ ನಿರಾಣಿ ಅವರು ಅಫಜಲಪೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ.ಉಮೇಶ ಜಾಧವ, ಶಾಸಕ ಬಸವರಾಜ‌ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಸುನೀಲ ವಲ್ಯಾಪೂರೆ, ಡಿ.ಸಿ.ಯಶವಂತ ವಿ. ಗುರುಕರ್, ನಗರ‌ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಎಸ್.ಪಿ.ಇಶಾ‌ ಪಂತ್, ಮಹಾನಗರ ಪಾಲಿಕೆ ಅಯುಕ್ತ‌ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ‌ ತೆಗ್ಗೆಳ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT