ಕಲಬುರ್ಗಿ: ಸಂಸದ ಡಾ.ಉಮೇಶ ಜಾಧವ ಸ್ವಗ್ರಾಮದಲ್ಲೇ ಹದಗೆಟ್ಟ ರಸ್ತೆ

ಕಾಳಗಿ: ತಾಲ್ಲೂಕಿನಲ್ಲಿ ಕಳೆದ 4–5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ಮಣ್ಣಿನ ರಸ್ತೆಗಳು ತೀವ್ರ ಹದಗೆಟ್ಟು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ರುಮ್ಮನಗೂಡ ಗ್ರಾಮದ ರಸ್ತೆಯ ಕಾಮಗಾರಿ ಕಳಪೆಯಾಗಿದ್ದು, ಈಗ ಸುರಿದ ಮಳೆಗೆ ಕೆಸರು ಗದ್ದೆಯಂತೆ ಬದಲಾಗಿದೆ. ವರ್ಷದಿಂದ ರಸ್ತೆಯಲ್ಲಿ ತಗ್ಗು–ಗುಂಡಿಗಳು ಬಿದ್ದಿವೆ. ಬಿದ್ದ ಅಲ್ಪ ಮಳೆಗೆ ರಸ್ತೆಯೆಲ್ಲ ಕೆಸರು ಮಯವಾಗುತ್ತದೆ. ಇದರಿಂದ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥ ಮಶಾಖ ಮಡಕಿ ದೂರಿದರು.
ಸಂಸದ ಡಾ.ಉಮೇಶ ಜಾಧವ ಮತ್ತು ಶಾಸಕ ಡಾ.ಅವಿನಾಶ ಜಾಧವ ಅವರ ಸ್ವಗ್ರಾಮ ಬೆಡಸೂರ ತಾಂಡಾದಿಂದ ಮುಕರಂಬಾ ಕ್ರಾಸ್ ವರೆಗಿನ ರಸ್ತೆ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದೆ. ಇದೇ ರಸ್ತೆಯು ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುತ್ತದೆ. ಪ್ರಯಾಣಿಕರು ನಿತ್ಯ ಪರದಾಡುತ್ತಾ ಇದೇ ರಸ್ತೆಯಲ್ಲಿ ಸಂಚರಿಸಬೇಕಿದೆ. ಅಧಿಕಾರಿಗಳು ಕೂಡಲೇ ದುರಸ್ತಿಗೆ ಮುಂದಾಗಬೇಕು ಎಂದು ದಲಿತ ಸೇನೆ ತಾಲ್ಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಸುರೇಶ ರಾಣಾಪುರ ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.