ಶನಿವಾರ, ಜನವರಿ 23, 2021
21 °C

ಸಂಭ್ರಮದ ಮುಲ್ಕಬಂಡಿ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಹಜರತ ಖಾಜಾ ಸೈಫನ ಮುಲ್ಕಬಂಡಿ ಜಾತ್ರಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಮಧ್ಯೆ ಜರುಗಿತು.

ಶನಿವಾರ ರಾತ್ರಿ 12.30ಕ್ಕೆ ಕರಜಗಿ ಗ್ರಾಮದಿಂದ ಹಜರತ್ ಖಾಜಾ ಸೈಫನ್ ಮುಲ್ಕರ ಗಂಧ ಹಾಗೂ ಗಲಾಪ್ ಹೊತ್ತುಕೊಂಡು ಬಂದಿದ್ದ ಜೋಡಿ ಎತ್ತುಗಳ ಮೆರವಣಿಗೆ ಜನರ ಜೈಕಾರ ಮತ್ತು ವಾದ್ಯಗಳೊಂದಿಗೆ ನಡೆಯಿತು. ಇಡೀ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೈದ್ರಾ ಗ್ರಾಮದ ಹಜರತ್ ಖಾಜಾ ಸೈಫನ ಮುಲ್ಕ್ ದರ್ಗಾಕ್ಕೆ ಭಾನುವಾರ ಬೆಳಿಗ್ಗೆ ತಲುಪಿತು.

ನಂತರ ಗಂಧ ಲೇಪನ ಮಾಡಿ ಕೊಂಡು ಬೆಳಿಗ್ಗೆ ಅಲ್ಲಿಂದ ಹೊರಟು ಮಧ್ಯಾಹ್ನ ಕರಜಗಿ ದರ್ಗಾಕ್ಕೆ ತಲುಪಿತು. ಬಂಡಿ ಕುಳಿತ ನಂತರ ‘ಸೈಫನ್‌ ಮುಲ್ಕ್ ಕಿ ದೊಸ್ತಾರಾ ಹೊ ದಿನ್’ ಎಂದು ಭಕ್ತರು ಜೈಕಾರ ಕೂಗಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮುಖಂಡರಾದ ಪೊನ್ನಪ್ಪ ಇರ್ಫಾನ್, ಚಿದಾನಂದ ತಳವಾರ, ರಮೇಶ ಕ್ಷತ್ರಿಯ, ಗಿರಿಮಲ್ಲಯ್ಯ ಹಿರೇಮಠ, ಖಾಸಿಂ ಚೌದರಿ, ಉಸ್ಮಾನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.