ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಲಿಕೆ ನಿವೃತ್ತ ನೌಕರರಿಗೆ ಸೂಕ್ತ ಪಿಂಚಣಿ ನೀಡಿ’

Last Updated 4 ಸೆಪ್ಟೆಂಬರ್ 2022, 4:08 IST
ಅಕ್ಷರ ಗಾತ್ರ

ಕಲಬುರಗಿ: ‘ಹತ್ತು ವರ್ಷ ದಿನಗೂಲಿ ಸೇವೆ ಸಲ್ಲಿಸಿದ ನಂತರ ಕಾಯಂಗೊಂಡ ಮಹಾನಗರ ಪಾಲಿಕೆ ನಿವೃತ್ತ ನೌಕರರಿಗೆ ಕೆಸಿಎಸ್‌ಆರ್‌ ನಿಯಮ ಅನುಸಾರ ಪಿಂಚಣಿ ಸೌಲಭ್ಯ ಕಲ್ಪಿಸಿಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ಒತ್ತಾಯಿಸಿದರು.

‘60 ವರ್ಷ ಪೂರೈಸಿದ ನಿವೃತ್ತ ನೌಕರರಿಗೆ 3 ವರ್ಷ ಹಚ್ಚುವರಿ ಸೇವೆಯನ್ನು ಪಿಂಚಣಿ ಉದ್ದೇಶಕ್ಕಾಗಿ ಕೆಸಿಎಸ್‌ಆರ್‌ 248/ ಎ 6 ನಿಯಮದ ಪ್ರಕಾರ ಕೊಡುವಂತೆ 1995ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಆದರೂ ನಮಗೆ ಮೂರು ವರ್ಷದ ಸೇವೆ ಸೇರಿಸಿಲ್ಲ. ನ್ಯಾಯಾಲಯಕ್ಕೆ ಹೋಗಿ ಆದೇಶ ಪಡೆದ ಇಬ್ಬರಿಗೆ ಹೆಚ್ಚಿನ ಪಿಂಚಣಿ ಸಿಗುತ್ತಿದೆ. ಇದು ಎಲ್ಲ 226 ನಿವೃತ್ತ ನೌಕರರಿಗೂ ಅನ್ವಯಿಸಬೇಕು’

‘ಈಗ ಸೇವಾ ನಿವೃತ್ತಿಯ ಪಿಂಚಣಿ ಮತ್ತು ತಿಂಗಳ ಪಿಂಚಣಿ ಕಡಿಮೆ ಸಿಗುತ್ತಿದೆ. ಆದ್ದರಿಂದ ಮೂರು ವರ್ಷದ ಪಿಂಚಣಿ ಮೊತ್ತ ಮತ್ತು ತಿಂಗಳ ಪಿಂಚಣಿ ಪುನರ್ ಪರಿಶೀಲಿಸಿ ನ್ಯಾಯಯುತವಾಗಿ ನೀಡಬೇಕು. 10 ವರ್ಷಗಳ ವೇತನ ಸೌಲಭ್ಯಗಳನ್ನು ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಪಿಂಚಣಿಯಲ್ಲಿ ಉಪಧನ, ಸೇರಿಸಿ ನೀಡಲು ಕೋರಿಕೆ ಸಲ್ಲಿಸಿದ್ದೇವೆ’ಎಂದುಅವರುತಿಳಿಸಿದರು.

‘ನಿವೃತ್ತರಾಗಿ ಐದಾರು ವರ್ಷ ಕಳೆದರೂ ಈ ವಿಳಂಬದಿಂದ ಮಹಾನಗರ ಪಾಲಿಕೆಯ ನೌಕರರಿಗೆ ಸರಿಯಾದ ಪಿಂಚಣಿ ಸೌ ನಿವೃತ್ತ ನೌಕರರ ಹಿತ ಕಾಪಾಡಬೇಕು’ ಎಂದು ಅವರು ಕೋರಿದರು.

ಪ್ರಮುಖರಾದ ಸಿದ್ದಪ್ಪ ದಸ್ಮಾ, ಸುಭಾಷ್ ದಿಗ್ಗಾಂವ, ಅಬ್ದುಲ್ ಹಮೀದ್ ಅನ್ಸಾರಿ, ಬಸವರಾಜ ವಿ. ಕೋಳಕೂರ, ಧರ್ಮಣ್ಣ ಪಾಟೀಲ, ಬಾಬು ಮಿಯಾ, ಕಲ್ಯಾಣಪ್ಪ ಬಿರಾದಾರ, ಬಸವರಾಜ ಪಾಟೀಲ, ಅವಧೂತ ದೇಶಪಾಂಡೆ ಇದ್ದರು.

ನ್ಯಾಯಾಲಯದ ತೀರ್ಪಿನಂತೆ ನಿವೃತ್ತ ನೌಕರರಿಗೆ ಉಪಧನ ನೀಡುವಂತೆ ಒತ್ತಾಯಿಸಿ ಇದೇ 12ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಜಲಮಂಡಳಿ ನಿವೃತ್ತ ಸಿಬ್ಬಂದಿಗೂ ನ್ಯಾಯಯುತ ಪಿಂಚಣಿ ದೊರೆತಿದೆ. ನಮಗೆ ಕೊಡಲು ಏನಡ್ಡಿ?
ವೀರಭದ್ರ ಸಿಂಪಿ
ಅಧ್ಯಕ್ಷ, ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT