ಬುಧವಾರ, ನವೆಂಬರ್ 20, 2019
25 °C

ಕ್ಷುಲ್ಲಕ ಕಾರಣ: ಮಾರಕಾಸ್ತ್ರಗಳಿಂದ ಹೊಡೆದು ಸ್ನೇಹಿತನ ಕೊಲೆ

Published:
Updated:

ಕಲಬುರ್ಗಿ: ಇಲ್ಲಿನ ಖರ್ಗೆ ಕಾಲೊನಿಯಲ್ಲಿ ಬುಧವಾರ ತಡರಾತ್ರಿ ಹಣಕಾಸಿನ ವಿಷಯಕ್ಕೆ ಮೂವರು ಸ್ನೇಹಿತರ ಮಧ್ಯೆ ಆರಂಭವಾದ ಜಗಳ, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಪ್ರಶಾಂತ್ ಕೋಟಗಿ (35) ಕೊಲೆಯಾದ ಯುವಕ. ಈತನ ಸ್ನೇಹಿತರೇ ಆದ ಮಹೇಶ ಹಾಗೂ ವಿನೋದ ಆರೋಪಿಗಳು.

ಮೂವರೂ ಸೇರಿಕೊಂಡು ಆಗಾಗ ಪಾರ್ಟಿ ಮಾಡುತ್ತಿದ್ದರು. ಇದಕ್ಕಾಗಿ ಹಣ ಹೊಂದಿಸಿಕೊಳ್ಳುತ್ತಿದ್ದರು. ಇದೇ ರೀತಿ ಹಣ ಹೊಂದಿಸಿ ಬುಧವಾರ ರಾತ್ರಿ ಕೂಡ ಖರ್ಗೆ ಕಾಲೊನಿಯ ಅಫಜಲಪುರ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಪಾರ್ಟಿ ಮಾಡಲು ಸೇರಿದ್ದರು.

ಹಣ ಸೇರಿಸುವ ವಿಚಾರವಾಗಿ ಪ್ರಶಾಂತ್‌ ವಿರುದ್ಧ ಉಳಿದಿಬ್ಬರು ಜಗಳ ತೆಗೆದಿದ್ದಾರೆ. ಇದು ಅತಿರೇಕಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಪ್ರಶಾಂತ್‌ ಸತ್ತಿದ್ದನ್ನು ಖಚಿತ ಮಾಡಿಕೊಂಡ ಮೇಲೆ ಇಬ್ಬರೂ ಆರೋಪಿಗಳು ಪರಾರಿಯಾದರು. ಬೆಳಿಗ್ಗೆ ಜನರು ನೋಡಿದ ಮೇಲೆಯೇ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರತಿಕ್ರಿಯಿಸಿ (+)