ಸೋಮವಾರ, ಜುಲೈ 26, 2021
26 °C
ಯಡ್ರಾಮಿ: ತಾಲ್ಲೂಕಿನ ಜಮಖಂಡಿ ಗ್ರಾಮದಲ್ಲಿ ಅಣ್ಣನಿಂದ ತಮ್ಮನ ಕೊಲೆ

ಜಮಖಂಡಿ: ಕಲ್ಲಿನಿಂದ ಜಜ್ಜಿ ಅಣ್ಣನಿಂದ ತಮ್ಮನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಜಮಖಂಡಿ ಗ್ರಾಮದಲ್ಲಿ ಆಸ್ತಿ ಮಾರಾಟ ಮಾಡಿದ ಹಣವನ್ನು ಹಂಚಿಕೊಳ್ಳುವ ವಿಚಾರವಾಗಿ ಅಣ್ಣನೇ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ವಿಶ್ವರಾಧ್ಯ ತಂದೆ ಭೀಮರಾಯ ಯಾಳಗಿ (30) ಕೊಲೆಯಾದ ವ್ಯಕ್ತಿ. ಜಮೀನು ಮಾರಾಟ ಮಾಡಿದ ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರವಾಗಿ ಇಬ್ಬರಿಗೂ ಜಗಳವಾಗಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ಇತನ ಅಣ್ಣ ಮತ್ತಪ್ಪ ತಂದೆ ಭೀಮರಾಯ ಯಾಳಗಿ ಎಂಬಾತ ಕೊಲೆ ಮಾಡಿದ್ದಾನೆ.

ಆಸ್ತಿ ಮಾರಾಟ ಮಾಡಿದ ಹಣ ಕೊಡಬೇಕು ಎಂದು ವಿಶ್ವರಾಧ್ಯ ಹಠ ಹಿಡಿದಿದ್ದರಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮೃತನ ಅಣ್ಣ ಮದ್ಯವ್ಯಸನಿಯಾಗಿದ್ದು, ಕುಡಿದ ಅಮಲಿನಲ್ಲಿ ವಿಶ್ವರಾಧ್ಯನ ಮನೆಗೆ ಹೋಗಿ ಕೊಲೆ ಮಾಡಿರಬಹುದು ಎನ್ನಲಾಗಿದೆ. ಆರೋಪಿಯನ್ನು ಕಲಬುರ್ಗಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸ್ಥಳಕ್ಕೆ ಸರ್ಕಲ್ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮೇಶ ರೊಟ್ಟಿ, ಪಿಎಸ್‍ಐ ಗಜಾನಂದ ಬಿರಾದಾರ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು