ಸೋಮವಾರ, ಡಿಸೆಂಬರ್ 5, 2022
21 °C

ಚಾಕುವಿನಿಂದ ಇರಿದು ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ತಾಲ್ಲೂಕಿನ ಅರಣಕಲ್ ಕಿಂಡಿ ತಾಂಡಾದಲ್ಲಿ ಮನೆ ಜಾಗದ ವಿಚಾರದ ಜಗಳವಾಗಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

‘ಆನಂದ ಜೀವಲಾ ಚವ್ಹಾಣ (24) ಕೊಲೆಯಾದವರು. ಮನೆ ಜಾಗದ ತಕರಾರಿಗೆ ಸಂಬಂಧಿಸಿ ಮಂಗಳವಾರ ರಾತ್ರಿ ಮನೆ ಪಕ್ಕದ ಸಂಬಂಧಿಕರಿಂದ ಜಗಳ ಶುರುವಾಗಿ ಆನಂದ ಹೊಟ್ಟೆಗೆ ಚಾಕು ಇರಿಯಲಾಗಿದೆ. ಜಗಳ ಬಿಡಿಸಲು ಬಂದ ಆನಂದ ಅವರ ಅಣ್ಣ ನಕುಲ್ ಜೀವಲಾ ಚವ್ಹಾಣ ಎಂಬುವರಿಗೂ ಗಾಯವಾಗಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಕುಲ್ ನೀಡಿದ ದೂರಿನನ್ವಯ ಭೀಮಸಿಂಗ್ ಮೋನು ಜಾಧವ, ನೀಲೇಶ್ ಮೋನು ಜಾಧವ, ಸಚಿನ್ ಗೋಪು ರಾಠೋಡ್, ಮಿಲಿಂದ್ ರಮೇಶ ಚವ್ಹಾಣ, ರಮೇಶ ಮೋನು ಜಾಧವ, ಕಬಿರ್ ಭೋಜು ಜಾಧವ, ಸಂಜು ಪಾಂಡು ರಾಠೋಡ್, ಪಾಂಡು ಸುಭಾಷ್ ರಾಠೋಡ, ರಾಹುಲ್ ವಿಠಲ್ ರಾಠೋಡ್, ಸೋನು ದಶರಥ ರಾಠೋಡ, ನಾಗೇಶ ಪಾಂಡು ರಾಠೋಡ, ಈಶ್ವರ ಮಾರುತಿ ರಾಠೋಡ ಸೇರಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಶಹಾಬಾದ್‌ ಡಿವೈಎಸ್ಪಿ ಉಮೇಶ ಚಿಕ್ಕಮಠ, ಕಾಳಗಿ ಸಿಪಿಐ ವಿನಾಯಕ ನಾಯಕ, ಪಿಎಸ್ಐ ಹುಲೆಪ್ಪ ಗೌಡಗೊಂಡ, ಕ್ರೈಂ ಪಿಎಸ್ಐ ಅಮೋಜ್ ಕಾಂಬಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು