ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ಬಿಟ್ಟು ಹಾಡಿದರೆ ಭವಿಷ್ಯವಿಲ್ಲ: ಭೃಂಗಿಮಠ

Last Updated 22 ಸೆಪ್ಟೆಂಬರ್ 2020, 15:35 IST
ಅಕ್ಷರ ಗಾತ್ರ

ಕಲಬುರ್ಗಿ: ‘ಇತ್ತೀಚಿನ ದಿನಗಳಲ್ಲಿಕೆಲವರು ಸಂಗೀತದ ಸ್ವರಗಳನ್ನು ಮರೆತೇ ಗಾಯನ ಮಾಡುತ್ತಿದ್ದಾರೆ. ಇದು ಸಂಗೀತಕ್ಕೆ ಭದ್ರ ಬುನಾದಿ ಆಗುವುದಿಲ್ಲ.ಹೊಸ ಪ್ರತಿಭೆಗಳು ನಿಯಮ ಬದ್ಧ ಸ್ವರದಿಂದ ಸಂಗೀತವನ್ನು ಕಲಿತರೆ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ’ ಹೈಕೋರ್ಟ್‌ ವಕೀಲ, ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಸಲಹೆ ನೀಡಿದರು.

ನಗರದ ಅಮರಪ್ರಿಯ ಶೈಕ್ಷಿಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ ಮಂಗಳವಾರ ಏರ್ಪಡಿದ್ದ ‘ಸಂಗೀತ ಸ್ವರ’ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಸಂಗೀತಕ್ಕೆ ಸೋಲದ ಮನಸ್ಸುಗಳು ಇತಿಹಾಸದಲ್ಲೆಲ್ಲೂ ಇಲ್ಲ. ಪ್ರಾಚೀನ ಕಾಲದಲ್ಲಿ ಸಂಗೀತವನ್ನು ಸ್ವರಗಳ ಮೂಲಕವೇ ಆಲಿಸುತ್ತಿದ್ದರು. ಆದರೆ ಇಂದು ಅದು ವಿರಳವಾಗಿದೆ’ ಎಂದರು.

ಅಮರಪ್ರಿಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಮರಪ್ರಿಯ ಹಿರೇಮಠ ಮಾತನಾಡಿ, ಆಧುನಿಕ ಸಂಗೀತದಲ್ಲಿ ಸ್ವರಗಳು ತಾಳ ತಪ್ಪುತ್ತಿವೆ. ಹಳೆಯ ಕಾಲದ ಸಂಗೀತದಲ್ಲಿ ಮನುಷ್ಯನ ಜೀವನಕ್ಕೆ ಮಾದರಿಯ ಸಂಗೀತ ರಚೆನೆಯಾಗುತ್ತಿತ್ತು. ಆದರೆ ಈಗ ಸಂಗೀತದಲ್ಲಿ ಜೀವನಾಧಾರಿತ, ನೀತಿ ಹಾಡುಗಳು ಮರೆಯಾಗುತ್ತಿವೆ. ಸಂಗೀತದಲ್ಲಿ ಸ್ವರ, ಲಯ, ರಾಗ ಸಂಯೋಜನೆ, ಭಾವಗಳನ್ನು ಒಳಗೊಂಡ ಹಾಡುಗಳು ಮನುಕುಲಕ್ಕೆ ಅಗತ್ಯ ಎಂದರು.

ಕರ್ನಾಟಕ ವಿಜಯ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಂ. ಹಿರೇಮಠ ಮಾತನಾಡಿ, ಅಮರಪ್ರಿಯ ಹಿರೇಮಠ ಅವರಂಥ ಸಂಗೀತ ನಿರ್ದೇಶಕರು ನಮ್ಮ ಕಲ್ಯಾಣ ಕರ್ನಾಟಕದಲ್ಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅವರು ಬಡ ವಿದ್ಯಾರ್ಥಿಗಳಿಗೆ ಸಂಗೀತ ನೀಡುತ್ತ ಜೀವನಕ್ಕೆ ಬೆಳಕಾಗಿದ್ದಾರೆ. ಹಲವು ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಕೀರ್ತಿ ತಂದಿದ್ದಾರೆ ಎಂದರು.

ವೀರುಸ್ವಾಮಿ ನರೋಣಾ ಮಾತನಾಡಿದರು.ಮಹಾಲಕ್ಷ್ಮೀ ಪಾಟೀಲ, ವೈಷ್ಣವಿ ಹಿರೇಮಠ, ವಿಜಯಲಕ್ಷ್ಮಿ ಹಿರೇಮಠ, ಭಾಗ್ಯಶ್ರೀ ಅವರು ಪ್ರಾರ್ಥನೆ ಸಲ್ಲಿಸಿದರು. ಐದು ತಾಸು ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಭೃಂಗಿಮಠ ಅವರು ರಚಿಸಿರುವ ದೇಶಭಕ್ತಿ, ಭಾವಗೀತೆಗಳಿಗೆ ಅಮರಪ್ರಿಯ ಅವರು ಸ್ಥಳದಲ್ಲಿಯೇ ರಾಗ ಸಂಯೋಜನೆ ಮಾಡಿ ಹಾಡಿದ್ದು ವಿಶೇಷವಾಗಿತ್ತು.

ದೇಶಭಕ್ತಿ ಗೀತೆ, ಶರಣರ ವಚನ, ಸಂತರು, ದಾಸರ ಮತ್ತು ಗೀಗಿ ಪದಗಳ ಹಾಡುವ ಮುಖಾಂತರ ಸಂಗೀತಗಾರರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ದಯಾನಂದ ಹಿರೇಮಠ ವೀರೇಶ ಪಂಗರಗಿ, ಮಹೇಶ ಸ್ವಾಮಿ, ಚನ್ನು, ಬಸವಣ್ಣಪ್ಪ ಪಾಲಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT