ವಾಡಿ: ನಾಲವಾರ ರೈತ ಸಂಪರ್ಕ ಕೇಂದ್ರದ ವತಿಯಿಂದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಶನಿವಾರ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಮುಂಗಾರು ಹಂಗಾಮಿಗೆ ಅಗತ್ಯವಿರುವ ರೈತರ ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಚಾಲನೆ ನೀಡಿದೆ. ರೈತರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕಂದರ ಮಾತನಾಡಿ, ‘ಸರ್ಕಾರಿ ಅಧಿಕೃತ ಮಾರಾಟಗಾರರಿಂದಲೇ ಖರೀದಿ ಮಾಡಬೇಕು. ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಮುಂಗಾರು ಮಳೆ ಪೂರ್ಣಪ್ರಮಾಣದಲ್ಲಿ ಸುರಿಯದ ಕಾರಣ ಮಳೆಯ ಕೊರತೆಯಾದಾಗ ನೀರು ಕೊಡುವ ಅವಕಾಶ ಇದ್ದರೆ ಮಾತ್ರ ಸದ್ಯಕ್ಕೆ ಬಿತ್ತನೆ ಮಾಡಬೇಕು’ ಎಂದು ಹೇಳಿದರು.

‘ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು–127 ಪ್ರತಿ ಕೆಜಿಗೆ ಪೂರ್ಣದರ ₹ 127 ಇದ್ದು, ಸಾಮಾನ್ಯ ರೈತರಿಗೆ ₹ 102 ಇದ್ದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ₹89.50 ಇದೆ. ಹಾಗೇ ತೊಗರಿ ಪ್ರತಿ ಕೆಜಿಗೆ ₹ 132 ಪೂರ್ಣದರವಿದ್ದರೆ ಸಾಮಾನ್ಯ ರೈತರಿಗೆ ₹ 107, ಪ.ಜಾ ಹಾಗೂ ಪ.ಪಂ ರೈತರಿಗೆ ₹ 94.50 ಇದೆ. ಸಾಕಷ್ಟು ಬೀಜಗಳು ಲಭ್ಯ ಇದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕು. ರೈಸೋಬಿಯಂ ಟ್ರೈಕೋಡರ್ಮ್ನಿಂದ ಬೀಜೋಪಚಾರ ಮಾಡಿಯೇ ಬಿತ್ತಬೇಕು’ ಎಂದು ಸಲಹೆ ನೀಡಿದರು.

ಈ ವೇಳೆ ಕೃಷಿಕ ಸಮಾಜದ ಸದ್ಯಸರಾದ ಅಬ್ದುಲ್ ನಯಿಂ ಸೇಠ್ ನಾಲವಾರ, ನಿಂಗಣ್ಣಗೌಡ ಬಿರಾದಾರ, ಮಹಿಪಾಲರೆಡ್ಡಿ, ಶಿವರೆಡ್ಡಿ ಸೊಮರೆಡ್ಡಿ, ಶರಣಗೌಡ ಬೆನಕನಳ್ಳಿ, ಸಾಬಣ್ಣ ಸೇರಿದಂತೆ ಅನೇಕ ರೈತರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-31-202094033

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.