ಜೇವರ್ಗಿ: ತಾಲ್ಲೂಕಿನ ನರಿಬೋಳ ಗ್ರಾಮದ ವೀರಭದ್ರೇಶ್ವರ 55ನೇ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು.

ಶಿವನಿಚ್ಛೆ ಮಠದ ಶಿವಪುತ್ರಯ್ಯ ಸ್ವಾಮೀಜಿ ಹಾಗೂ ಮಹಾದೇವಯ್ಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸಿ ವೀರಭದ್ರ ದೇವರ ದರ್ಶನ ಪಡೆದರು. ಜಾತ್ರಾ ನಿಮಿತ್ಯ ಪುರಾಣ ಕಾರ್ಯಕ್ರಮದ ಮಹಾಮಂಗಲ ನಡೆಯಿತು.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ವೀರಭದ್ರೇಶ್ವರ ಗಂಗಾಸ್ನಾನ, ಪುರವಂತರ ಸೇವೆ ಜರುಗಿತು. ಗುರುವಾರ ಬೆಳಿಗ್ಗೆ 7 ಗಂಟೆಗೆ ಅಗ್ಗಿ ಪ್ರವೇಶ, ರಾತ್ರಿ 9 ಗಂಟೆಗೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ರಥೋತ್ಸವ ಜರುಗಿತು. ಉತ್ತತ್ತಿ, ಬಾಳೆಹಣ್ಣು ರಥದ ಮೇಲೆ ಎಸೆದು ಭಕ್ತರು ಹರಕೆ ತೀರಿಸಿದರು.

ರಾತ್ರಿ 10ಗಂಟೆಗೆ ವಿವಿಧ ಕಲಾ ತಂಡದವರಿಂದ ಲಾವಣಿ, ಗೀಗೀ ಪದ, ಯಲ್ಲಮ್ಮನ ನಾಟಕ ಪ್ರದರ್ಶನಗೊಂಡಿತು. ನೆಹರೂ ನವತರುಣ ಸಂಘದವರಿಂದ ಮದ್ದು ಸುಡುವ ಕಾರ್ಯಕ್ರಮ ಜರುಗಿತು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ, ಶಿವಣ್ಣ ಸಾಹು ಪಡಶೆಟ್ಟಿ, ಶಾಂತಗೌಡ ಪಾಟೀಲ, ನಾಗರಾಜಗೌಡ ಪಾಟೀಲ ರೇಷ್ಮೆ, ಶರಣಗೌಡ ಪೊಲೀಸ್ ಪಾಟೀಲ, ತಿಪ್ಪಣ್ಣ ಸುಬೇದಾರ, ಶಿವಕುಮಾರ ಪಾಟೀಲ, ಗುರುರಾಜ ಸುಬೇದಾರ, ನಿಂಗಣ್ಣ ಭಂಡಾರಿ, ಶರಣಪ್ಪಗೌಡ ಹರನೂರ, ಈರಣ್ಣ ಗಡ್ಡದ್, ಗುರುರಾಜ ಸೂಲಹಳ್ಳಿ, ಈಸಪ್ಪ ತಳವಾರ ಸೇರಿದಂತೆ ಸುತ್ತಮುತ್ತಲಿನ ಮದರಿ, ಯನಗುಂಟಿ, ರಾಜವಾಳ, ಗುಡೂರ, ಮಲ್ಲಾ.ಕೆ,ಮಲ್ಲಾ.ಬಿ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-31-396739112

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.