ಕಲಬುರಗಿ: ಇನ್ನರ್ ವೀಲ್ ಕ್ಲಬ್ ಆಫ್ ಗುಲಬರ್ಗಾ ಉತ್ತರ ವತಿಯಿಂದ ಶಿಕ್ಷಕರ ದಿನ ಮತ್ತು ಎಂಜಿನಿಯರ್ ದಿನವನ್ನು ಆಚರಿಸಲಾಯಿತು.
ಜಿಲ್ಲಾಮಟ್ಟದ ಶಿಕ್ಷಕರಿಗೆ ‘ನೇಷನ್ ಬಿಲ್ಡರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಎಂಜಿನಿಯರ್‌ಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಡಾ.ಸಾಗರ್ ಬಿರಾದಾರ ಅವರು ಸಕ್ಕರೆ ಕಾಯಿಲೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗವರ್ನರ್ ಮಾಣಿಕ್ ಪವಾರ್, ರೋಟರಿ ಕ್ಲಬ್ ಉತ್ತರ ಅಧ್ಯಕ್ಷ ರಾಮ್ ಶಾನ್‌ಭಾಗ್, ಜ್ಯೋತಿ ತೆಗನೂರ, ಲಕ್ಷ್ಮಿ ಅಡಕೆ, ಸವಿತಾ ಮಠ, ಸುಷ್ಮಾ ಹಡಗಲಿಮಠ, ಸವಿತಾ ಹಾಲಳ್ಳಿ, ಸುನಿತಾ ಹೊಸಳ್ಳಿ, ಶ್ರೀದೇವಿ ನಾಗನಹಳ್ಳಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.