ಎಸ್‌ಬಿಆರ್‌ಗೆ ರಾಷ್ಟ್ರೀಯ ಪುರಸ್ಕಾರ

7

ಎಸ್‌ಬಿಆರ್‌ಗೆ ರಾಷ್ಟ್ರೀಯ ಪುರಸ್ಕಾರ

Published:
Updated:
Prajavani

ಕಲಬುರ್ಗಿ: ಮುಂಬೈನ ಐಐಟಿಯಲ್ಲ ಈಚೆಗೆ ಜರುಗಿದ ರಾಷ್ಟ್ರೀಯ ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ನಗರದ ಎಸ್‌ಬಿಆರ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರಾಘವೇಂದ್ರ ಬಿರಾದಾರ ತಯಾರಿಸಿರುವ ‘ಇಂಟಿಗ್ರೇಟೆಡ್ ಚಿಪ್ ಸಿಸ್ಟ್‌ಂ ಫಾರ್ ಕಂಟ್ರೋಲಿಂಗ್ ಫಾಗ್’ ಮಾದರಿಗೆ ಬಹುಮಾನ ದೊರೆತಿದೆ.

ಅಂತರರಾಷ್ಟ್ರೀಯ ಟ್ಯಾಲೆಂಟ್ ಹಂಟ್ ಸ್ಪರ್ಧೆಗೂ ಈ ಮಾದರಿ ಆಯ್ಕೆಯಾಗಿದ್ದು, 2019ರ ಏಪ್ರಿಲ್‌ನಲ್ಲಿ ಥೈಲ್ಯಾಂಡ್‌ನಲ್ಲಿ ಜರುಗಲಿರುವ ಸ್ಪರ್ಧೆಯಲ್ಲಿ ಈತ ಪಾಲ್ಗೊಳ್ಳಲಿದ್ದಾನೆ. ಶಿಕ್ಷಕ ಎಸ್.ಶ್ರೀನಿವಾಸ್ ಮಾರ್ಗದರ್ಶಕರಾಗಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ, ಪ್ರಾಂಶುಪಾಲ ಎನ್.ಎಸ್.ದೇವರಕಲ್ ಮೆಚ್ಚುಗೆ ವ್ಯಕ್ತಪಡಿಸಿ, ಅಂತರರಾಷ್ಟ್ರೀಯ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !