ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಕಲಬುರಗಿ ಬಸ್ ನಿಲ್ದಾಣ ಆಯ್ಕೆ

Last Updated 9 ಆಗಸ್ಟ್ 2022, 4:27 IST
ಅಕ್ಷರ ಗಾತ್ರ

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ನವದೆಹಲಿಯ ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್ಸ್ ಸಂಸ್ಥೆಯು ದೇಶದ 75 ಬಸ್ ನಿಲ್ದಾಣಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಕಲಬುರಗಿ ಕೇಂದ್ರ ಬಸ್ ನಿಲ್ದಾಣವೂ ಒಂದು. ಹೀಗಾಗಿ, ಆಗಸ್ಟ್ 11ರಿಂದ 15ರವರೆಗೆ ನಿಲ್ದಾಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರ ವಾರ್ತಾ ಮತ್ತ ಪ್ರಚಾರ ಇಲಾಖೆಯ ಪಿಐಬಿ ಸಿದ್ಧತೆ ನಡೆಸಿದ್ದು, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸಹಕಾರ ನೀಡಲಿದೆ.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಮಾತನಾಡಿ, ‘ಈ ಅವಧಿಯಲ್ಲಿ ನಿರಂತರವಾಗಿ ಬಸ್ ನಿಲ್ದಾಣ ದಲ್ಲಿ ವಿಭಿನ್ನ ಕಾರ್ಯ ಕ್ರಮಗಳ ಆಯೋ ಜನೆಗೆ ಸಂಸ್ಥೆ ಸಿದ್ಧತೆ ನಡೆಸಿದೆ. ಆಗಸ್ಟ್ 11ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು. ಅಮೃತ ಮಹೋತ್ಸವದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಸಂಸ್ಥೆಯ ಕಲಬುರಗಿ ವಿಭಾಗ–1 ಮತ್ತು 2ರ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ವೇಳಾಪಟ್ಟಿಯಂತೆ ಚಟುವಟಿಕೆ ನಡೆಸಲು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೋರಾಟಗಾರರ ಜೀವನ, ಸಾಧನೆ ಪ್ರದರ್ಶನ: ಅಮೃತ ಮಹೋತ್ಸವದ ಪ್ರಯುಕ್ತ ಬಸ್ ನಿಲ್ದಾಣದಲ್ಲಿ ಸ್ಥಳೀಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಮತ್ತು ರಾಷ್ಟ್ರೀಯ ನಾಯಕರ ಭಾವಚಿತ್ರಗಳ ಪ್ರದರ್ಶನ, ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲಾ ರಾಷ್ಟ್ರೀಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಡಿಜಿಟಲ್ ಪೋಸ್ಟರ್‌ ಮತ್ತು ಬೋರ್ಡ್ ಸ್ಟ್ಯಾಂಡ್‍ ಹಾಕಲಾಗುವುದು. ಬಸ್ ನಿಲ್ದಾಣದಲ್ಲಿ ದೊಡ್ಡ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಲಾಗುವುದು. ಜಿಲ್ಲೆಯಲ್ಲಿನ ರಾಷ್ಟ್ರ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರಿದ್ದಲ್ಲಿ, ಅವರ ಭಾವಚಿತ್ರದೊಂದಿಗೆ ಅವರ ಜೀವನ, ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದಲ್ಲದೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪೋಸ್ಟರ್‌ಗಳನ್ನು ಬಸ್ಸಿನ ಒಳಗೆ ಮತ್ತು ಹೊರಭಾಗದಲ್ಲಿ ಅಂಟಿಸಿ ಪ್ರದರ್ಶಿಸಲಾಗುವುದು. ಡಿಜಿಟಲ್ ಡಿಸ್‌ಪ್ಲೇಗಳಲ್ಲಿ ರಾಷ್ಟ್ರ ಪ್ರೇಮದ ಚಿತ್ರಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಬಿತ್ತರಿಸುವುದಲ್ಲದೆ ಸಂಸ್ಥೆಯ ಸಂಚಾರಿ ಸಿಬ್ಬಂದಿಗೆ ರಾಷ್ಟ್ರಧ್ವಜದ ಬ್ಯಾಡ್ಜ್‌, ಧ್ವಜಗಳು, ಟಿ ಶರ್ಟ್‍ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶಭಕ್ತಿ ಗೀತೆಗಳು: ಒಂದು ವಾರ ಕಾಲ ಸತತವಾಗಿ ಬಸ್ ನಿಲ್ದಾಣದಲ್ಲಿ, ದೇಶಪ್ರೇಮದ ಗೀತೆಗಳು ಮೊಳಗಲಿವೆ. ದೇಶಭಕ್ತಿ ಘೋಷಣೆಗಳನ್ನು ಬರೆಯುವ, ರಂಗೋಲಿ, ಚಿತ್ರಕಲೆ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT