ಮಂಗಳವಾರ, ನವೆಂಬರ್ 12, 2019
28 °C

ನವೋದಯ: ಅರ್ಜಿ ಆಹ್ವಾನ

Published:
Updated:
prajavani

ಕಲಬುರ್ಗಿ: ಇಲ್ಲಿನ ಜವಾಹರ ನವೋದಯ ವಿದ್ಯಾಲಯ–1ರ 9ನೇ ತರಗತಿಗೆ ಖಾಲಿ ಇರುವ ಸೀಟುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಫಜಲಪುರ, ಆಳಂದ, ಕಲಬುರ್ಗಿ ಉತ್ತರ, ಕಲಬುರ್ಗಿ ದಕ್ಷಿಣ ಹಾಗೂ ಜೇವರ್ಗಿ ತಾಲ್ಲೂಕಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್‌ 12ರವರೆಗೆ www.navodaya.gov.in ಅಥವಾ www.nvsadmissionclassnine.in ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. 2020ರ ಫೆಬ್ರುವರಿ 8ರಂದು ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳು 2019–20ನೇ ಸಾಲಿನಲ್ಲಿ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿ 1–5–2004ರಿಂದ 30–4–2008ರವರೆಗೆ ಜನಿಸಿರಬೇಕು. ಮಾಹಿತಿಗಾಗಿ 08472–226012 ಸಂಖ್ಯೆ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)