ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ನೆಕ್ಲೇಸ್ ಮರಳಿಸಿದ ಸಾರಿಗೆ ಸಿಬ್ಬಂದಿ

Last Updated 16 ಆಗಸ್ಟ್ 2021, 3:56 IST
ಅಕ್ಷರ ಗಾತ್ರ

ಕಲಬುರ್ಗಿ: ವಿಜಯಪುರ ಜಿಲ್ಲೆಯ ಗಬಸಾವಳಗಿ ಗ್ರಾಮದಿಂದ ಕಲಬುರ್ಗಿಗೆ ಬಂದ ಪ್ರಯಾಣಿಕರೊಬ್ಬರು ಚಿನ್ನದ ಸರವಿದ್ದ ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿ ಅದನ್ನು ಪ್ರಯಾಣಿಕರಿಗೆ ವಾಪಸ್‌ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ವಿಜಯಪುರದ ಯರಗಲ್ ಗ್ರಾಮದ ಮಹೇಶ ಬಡಿಗೇರ ಅವರು ಭಾನುವಾರ ವಿಜಯಪುರ–ಕಲಬುರ್ಗಿ ಮಧ್ಯೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಬಸ್‌ ಕಾರ್ಯಾಚರಣೆ ಮುಗಿಸಿ ಘಟಕ 1ಕ್ಕೆ ವಾಪಸಾದಾಗ ಚಾಲಕ ರಾಘವೇಂದ್ರ ಹಾಗೂ ನಿರ್ವಾಹಕ ಖಂಡೋಬಾ ಅವರು ಆ ಬ್ಯಾಗನ್ನು ಘಟಕ ವ್ಯವಸ್ಥಾಪಕ ಮಂಜುನಾಥ ಮಾಯಣ್ಣವರ ಅವರಿಗೆ ತಲುಪಿಸಿದ್ದರು. ಅದರಲ್ಲಿ ನಾಲ್ಕು ತೊಲೆ ಚಿನ್ನದ ನೆಕ್ಲೇಸ್ ಇತ್ತು. ಮಹೇಶ ಬಡಿಗೇರ ಅವರು ಈ ಬಗ್ಗೆ ಸಂಸ್ಥೆಯ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಭದ್ರತಾ ಸಿಬ್ಬಂದಿ ಮಾಯಣ್ಣವರ ಅವರ ಗಮನಕ್ಕೆ ತಂದಾಗ ಚಾಲಕ, ನಿರ್ವಾಹಕರನ್ನು ವಿಚಾರಿಸಿದರು. ಮಹೇಶ ಅವರು ಟಿಕೆಟ್‌ ತೋರಿಸಿದಾಗ ಈ ಚಿನ್ನ ಅವರೇ ಬಿಟ್ಟು ಹೋಗಿದ್ದ ಬ್ಯಾಗ್‌ನಲ್ಲಿ ಸಿಕ್ಕಿತು ಎಂದು ಖಾತ್ರಿಪಡಿಸಿಕೊಂಡು ಚಿನ್ನದ ನೆಕ್ಲೇಸ್ ಮರಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT